ಮಾಜಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್ ಇದರ 2 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ನ.30ರಂದು ನೂತನ ಸಹಕಾರ ಸಂಘ ಆರಂಭದ ಕುರಿತು ಮಾಜಿ ಸಚಿವ ಎಸ್.ಅಂಗಾರರವರು ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದರು.
ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸಹಕಾರ ಸಂಘಗಳ ಉಪ ನಿರ್ದೇಶಕ ರಮೇಶ್ ಎನ್.ಎಚ್., ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ಸುಳ್ಯ ತಾಲೂಕು ಆರ್.ಎಸ್.ಎಸ್. ಸಂಘ ಚಾಲಕರಾದ ಚಂದ್ರಶೇಖರ ತಳೂರು, ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಟಿಎಪಿಸಿಎಂಎಸ್ ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿರುವರು. ಲೆಕ್ಕ ಪರಿಶೋಧಕರಾದ ಶ್ರೀಪತಿ ಭಟ್, ರಾಜ್ಯಮೊಗೇರ ಸಂಘದ ಅಧ್ಯಕ್ಷ ನಂದರಾಜ ಸಂಕೇಶ, ಮೊಗೇರ ಅಧ್ಯನ ಟ್ರಸ್ಟ್ ಅಧ್ಯಕ್ಷರಾದ ಡಾ. ರಘು ಬೆಳ್ಳಿಪ್ಪಾಡಿ ಗೌರವ ಉಪಸ್ಥಿತರಿರುವರು.
ಸಹಕಾರ ಸಂಘದ ಲೋಕಾರ್ಪಣೆ ಬಳಿಕ ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸಭೆ ನಡೆಯುವುದು.
ದೀನ್ ದಯಾಳ್ ಎಜ್ಯುಕೇಶನ್ ರೂರಲ್ ಅರ್ಬನ್ ಡೆವಲಪ್ಮೆಂಟ್ ಟ್ರಸ್ಟ್ ಇದರ ನೇತೃತ್ವದಲ್ಲಿ ಸಂಘವು ಕಾರ್ಯಾಚರಣೆ ಮಾಡುತಿದ್ದು, ಟ್ರಸ್ಟ್ ನ ನೇತೃತ್ವದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಆಲೆಟ್ಟಿಯ ಕುಡೆಕಲ್ಲಿನಲ್ಲಿ ಆದಿದ್ರಾವಿಡ ಕುಟುಂಬಗಳಿಗೆ ಸರಕಾರದಿಂದ ಒಂದು ಮನೆಗೆ ರೂ.60 ಸಾವಿರ ಅನುದಾನ ದೊರೆತ ಸಂದರ್ಭ ಉಳಿಕೆ ಹಣವನ್ನು ಟ್ರಸ್ಟ್ ಮೂಲಕ ಭರಿಸಿ ಆರ್.ಸಿ.ಸಿ.ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಇದೇ ರೀತಿ ದೇವಚಳ್ಳದಲ್ಲಿ 9 ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಇಷ್ಟೆ ಅಲ್ಲದೆ ಪ.ಜಾತಿ ಕಾಲೋನಿಗಳಲ್ಲಿ ಜನರು ಆರಾಧಿಸುವ ದೇವಸ್ಥಾನ, ದೈವಸ್ಥಾನದ ಜೀರ್ಣೋದ್ಧಾರ ಗಳಿಗೂ ಸಹಕಾರ ನೀಡಲಾಗಿದೆ. ಶಿಕ್ಷಣ, ಆರೋಗ್ಯ ಚಿಕಿತ್ಸೆಗೂ ಸಹಕಾರ ನೀಡಲಾಗಿದೆ ಎಂದು ಅಂಗಾರರು ಹೇಳಿದರು.
ಈಗ ಸಹಕಾರ ಸಂಘ ಲೋಕಾರ್ಪಣೆ ಯಾಗಲಿದ್ದು 18 ಯೋಜನೆಗಳನ್ನು ಜನರಿಗೆ ನೀಡಲಾಗುತ್ತದೆ. ಆರ್ಥಿಕತೆ ಉಳಿತಾಯ, ಹೈನುಗಾರಿಕೆ, ಸ್ವ ಉದ್ಯೋಗ ಗಳಿಗೆ ಆದ್ಯತೆ ನೀಡಲಾಗುವುದು ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವರ್ತಕ ರಾದ ಜಿ.ಜಗನ್ನಾಥ ಜಯನಗರ, ಹರಿಶ್ಚಂದ್ರ ಹಾಸನಡ್ಕ ಇದ್ದರು.
Post a Comment