ಬೆಂಗಳೂರಲ್ಲಿ ಹೊಸ ಮನೆಗಳಿಗೆ ಗ್ರೇ ವಾಟರ್‌ ರೀಸೈಕ್ಲಿಂಗ್‌ ಕಡ್ಡಾಯ! ಏನಿದು ಯೋಜನೆ, ಇಲ್ಲಿದೆ ವಿವರ


ಬೆಂಗಳೂರು : ಭವಿಷ್ಯದ ದೃಷ್ಟಿಯಿಂದ ಪರಿಣಾಮಕಾರಿಯಾಗಿ ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆ ಮಾಡುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿ, ನಗರದಲ್ಲಿ ಹೊಸದಾಗಿ ನಿರ್ಮಾಣವಾಗುವ 'ಇಂಡಿಪೆಂಡೆಂಟ್‌ ಹೌಸ್‌' (ವೈಯಕ್ತಿಕ ಮನೆ)ಗಳಿಗೆ 'ಗ್ರೇ ವಾಟರ್‌ ರೀಸೈಕ್ಲಿಂಗ್‌' (ಬೂದು ನೀರು ಮರುಬಳಕೆ) ಪದ್ಧತಿಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ತ್ಯಾಜ್ಯನೀರು ಸಂಸ್ಕರಣೆ ಮತ್ತು ನಿರ್ವಹಣೆ ಉದ್ದೇಶದಿಂದ ಈಗಾಗಲೇ ನಗರದಲ್ಲಿರುವ 120 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗಳಿಗೆ 'ತ್ಯಾಜ್ಯನೀರು ಸಂಸ್ಕರಣ ಘಟಕ' (ಎಸ್‌ಟಿಪಿ) ನಿರ್ಮಾಣ ಕಡ್ಡಾಯಗೊಳಿಸಿದೆ. ಇದರ ಮುಂದುವರಿದ ಭಾಗವಾಗಿ ಮುಂದೆ ಹೊಸದಾಗಿ ನಿರ್ಮಾಣವಾಗುವ ಇಂಡಿಪೆಂಡೆಂಟ್‌ ಹೌಸ್‌ಗಳಿಗೆ 'ಗ್ರೇ ವಾಟರ್‌ ರೀಸೈಕ್ಲಿಂಗ್‌' ಪದ್ಧತಿ ಕಡ್ಡಾಯಗೊಳಿಸಲು ಜಲಮಂಡಳಿಯು ತಜ್ಞರ ಜತೆ ನಾಲ್ಕಾರು ಬಾರಿ ಚರ್ಚಿಸಿ ಅಂತಿಮ ನಿರ್ಧಾರ ಮಾಡಿದೆ. ಈ ಸಂಬಂಧ ನಿಯಮ ರೂಪಿಸಲು ಜಲಮಂಡಳಿ ರಾಜ್ಯ ಸರಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಲಿದೆ. ವಿಶ್ವದಲ್ಲಿಅತ್ಯಂತ ನೀರಿನ ಒತ್ತಡವಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂಬುದನ್ನು 2018ರ ನೀತಿ ಆಯೋಗದ ನೀರು ನಿರ್ವಹಣಾ ವರದಿ ಬಹಿರಂಗಪಡಿಸಿದೆ. ದೇಶದಲ್ಲಿ ಜಾಗತಿಕ ಜನಸಂಖ್ಯೆಯ ಶೇ.8ರಷ್ಟು ಮನೆಗಳಿದ್ದು, ಶೇ.4ರಷ್ಟು ಮಾತ್ರ ಸಿಹಿನೀರಿನ ಸಂಪನ್ಮೂಲವಿದೆ. ಭಾರತದಲ್ಲಿ ನೀರಿನ ಬೇಡಿಕೆಯು ಮುಂದಿನ ವರ್ಷದ ವೇಳೆಗೆ ಶೇ.22 ಮತ್ತು 2050ರ ವೇಳೆಗೆ ಶೇ.32ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುಸ್ಥಿರ ಮತ್ತು ಸಮರ್ಥನೀಯ ನೀರಿನ ನಿರ್ವಹಣೆಗಾಗಿ ಜಲಮಂಡಳಿ ಈ ನಿರ್ಧಾರ ಕೈಗೊಂಡಿದೆ.













Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget