ಬೆಂಗಳೂರು: ಬಿಬಿಎಂಪಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ನಡೆದಿರುವ ಸಾವಿರಾರು ಕೋಟಿ ರೂ.ಹಗರಣ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಸರ್ಕಾರದ ಎಲ್ಲ ಸಚಿವರು, 3 ಐಎಎಸ್ ಅಧಿಕಾರಿಗಳ ವಿರುದ್ಧ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ರಾಜ್ಯಪಾಲ ಮತ್ತು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ.
ದೂರು ನೀಡಿದ ಬಳಿಕ ಎನ್.ಆರ್.ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ತ್ಯಾಜ್ಯ ವಿಲೇವಾರಿ ನಿರ್ವಹಣೆ ಗುತ್ತಿಗೆಯನ್ನು ಕಪ್ಪುಪಟ್ಟಿಗೆ ಸೇರಿರುವ ಆರ್ಎಎಂಕೆವೈ ಇನ್ಫಾಸ್ಟ್ರಕ್ಚರ್ ಪ್ರೈ.ಲಿ.ಗೆ ನೀಡಲು ಈಗಾಗಲೇ ಹುನ್ನಾರ ನಡೆದಿದೆ. ಆ ಕಂಪನಿಗೆ ಟೆಂಡರ್ ಕೊಡಿಸಲು ಸ್ವತ@ ಸಿದ್ದರಾಮಯ್ಯ ಸೇರಿ ಸರ್ಕಾರದ ಎಲ್ಲ ಸಚಿವರು ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಪಾಲಿಕೆಯ ಎಲ್ಲ ವಾರ್ಡ್ಗಳಲ್ಲಿ ನಿತ್ಯ 3,500ರಿಂದ 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಸರ್ಕಾರ ಸಿದ್ದಪಡಿಸಿರುವ ಕರಡುನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ 6,500 ಕೋಟಿ ರೂ.ಎಂದು ನಮೂದಿಸಲಾಗಿದೆ. ಪ್ರತಿ ಟನ್ ತ್ಯಾಜ್ಯದ ಸಂಗ್ರಹಣೆ,ಸಾಗಣೆಗೆ 1,300 ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಕರಡುನಲ್ಲಿ ಪ್ರತಿ ಟನ್ ತ್ಯಾಜ್ಯ ಸಂಗ್ರಹ, ಸಾಗಣೆಗೆ 2,343 ರೂ.ವೆಚ್ಚ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಪ್ರತಿ ಟನ್ಗೆ ತ್ಯಾಜ್ಯ ಸಂಸ್ಕರಣೆ ಕಾರ್ಯಕ್ಕೆ ಎಂಎಸ್ಜಿಪಿ ಕಂಪನಿಗೆ 260 ರೂ. ಟಿಪ್ಪಿಂಗ್ ಶುಲ್ಕವನ್ನು ಪಾಲಿಕೆ ಪಾವತಿಸುತ್ತಿದೆ. ಆದರೆ, ಹೊಸ ಪದ್ಧತಿಯಲ್ಲಿ ಟನ್ ತ್ಯಾಜ್ಯ ಸಂಸ್ಕರಣೆಗೆ 650 ರೂ. ನೀಡಲು ಸರ್ಕಾರ ಮುಂದಾಗಿದೆ. ಎಂಎಸ್ಜಿಪಿ ಸಂಸ್ಥೆಯವರು ತಮ್ಮ ಜಾಗದಲ್ಲೇ ಅವರದ್ದೇ ಖರ್ಚಿನಲ್ಲಿ ಮೂಲಸೌಕರ್ಯ ಕಲ್ಪಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರವು ಸಾವಿರಾರು ಕೋಟಿ ರೂ.ವೆಚ್ಚ ಮಾಡಿ ಆಯ್ದ 4 ಸ್ಥಳಗಳಲ್ಲಿ ತಲಾ 100 ಎಕರೆ ವಿಸ್ತೀರ್ಣದ ಸ್ವತ್ತು ಕ್ರಯಕ್ಕೆ ಪಡೆಯಲಾಗಿದೆ. ಸರ್ಕಾರದಿಂದಲೇ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಅವರವರ ಕಾರ್ಯಾದೇಶ ಪತ್ರದಲ್ಲಿರುವ ಮೊತ್ತವನ್ನಷ್ಟೇ ಪಾವತಿಸಲಾಗುತ್ತಿದೆ. ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಪದ್ಧತಿಯಲ್ಲಿ ಗುತ್ತಿಗೆದಾರನಿಗೆ ನೀಡಲಾಗುವ ಹಣವನ್ನು ಪ್ರತಿ ವರ್ಷ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಎನ್.ಆರ್.ರಮೇಶ್, ಹಗರಣ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು.
Post a Comment