ಹಣ್ಣುಗಳನ್ನು ಖರೀದಿಸುವಾಗ ಎಚ್ಚರ, ಯಥೇಚ್ಛವಾಗಿ ಬಳಕೆಯಾಗುತ್ತಿದೆ ರಾಸಾಯನಿಕ!


ಬೆಂಗಳೂರು : ಬಣ್ಣಬಣ್ಣದ ಆಕರ್ಷಕ ಹಣ್ಣುಗಳು, ಕಣ್ಣಿಗೆ ಖುಷಿ ಕಾಣುತ್ತದೆ, ಹೊಟ್ಟೆಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಣ ಕೊಟ್ಟು ಖರೀದಿಸಿ ಮನೆಗೆ ತಂದು ತಿನ್ನುತ್ತೇವೆ. ಬೆಂಗಳೂರಿನಂತಹ ನಗರದ ಮಾರುಕಟ್ಟೆಗಳಲ್ಲಿ ಆಕರ್ಷಕವಾದ ಹಣ್ಣುಗಳು ಜನರನ್ನು ಆಕರ್ಷಿಸುವುದು ಹೆಚ್ಚು. 

ಕಾಯಿಲೆ ಬಂದಾಗ ವೈದ್ಯರು ಚೆನ್ನಾಗಿ ಹಣ್ಣು-ತರಕಾರಿ ತಿನ್ನಿ ಎಂದು ಹೇಳುತ್ತಾರೆ ಎಂದು ದಿನಕ್ಕೊಂದು ಬಗೆಯ ಹಣ್ಣನ್ನು ಖರೀದಿಸಿ ತರುತ್ತೇವೆ. 






ಆದರೆ ಇವುಗಳಲ್ಲಿ ಹಲವು ಹಣ್ಣುಗಳು ಸ್ವಾಭಾವಿಕವಾಗಿ ಹಣ್ಣಾಗಿರುವುದಿಲ್ಲ, ಕೃತಕವಾಗಿ ಹಣ್ಣು ಮಾಡಲಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಎಚ್ಚರಿಸಿದ್ದಾರೆ. 



ರಾಜ್ಯದಾದ್ಯಂತ ಎಫ್‌ಎಸ್‌ಎಸ್‌ಎಐ ಅನುಮತಿಸಿದ ಸಸ್ಯ ಬೆಳವಣಿಗೆ ನಿಯಂತ್ರಕವಾದ ‘ಎಥೆಫೋನ್’ ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಇದನ್ನು ಪುಡಿ ರೂಪದಲ್ಲಿ ಬಳಸಿ ಕಾಯಿ ಹಣ್ಣಾಗಲು ಎಥಿಲೀನ್ ಅನಿಲ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 



ನಗರಗಳಲ್ಲಿ ಅನೇಕ ವ್ಯಾಪಾರಿಗಳು, ಎಥೆಫೋನ್ ಪುಡಿ ರೂಪದಲ್ಲಿ ಬಳಸುವ ಬದಲು, ಈ ರಾಸಾಯನಿಕಗಳ ದ್ರಾವಣಗಳಲ್ಲಿ ಹಣ್ಣುಗಳನ್ನು ನೆನೆಸಿ, ಮೃದುವಾಗಿ, ಸುಂದರವಾಗಿ ಹಣ್ಣಾದಂತೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತಿದ್ದಾರೆ. ಈ ದುರುಪಯೋಗದಿಂದ ಹಣ್ಣುಗಳಲ್ಲಿ ಅಪಾಯಕಾರಿ ಅಂಶ ಸೇರಿ ಮನುಷ್ಯರ ಆರೋಗ್ಯಕ್ಕೆ ಹಾನಿಕಾರವಾಗಿದೆ. 










ಕಳೆದ ವರ್ಷ ಕ್ಯಾಲ್ಸಿಯಂ ಕಾರ್ಬೈಡ್‌ನ ನಿಷೇಧವನ್ನು ಅನುಸರಿಸಿ ಎಥೆಫೋನ್‌ಗೆ ಅನುಮೋದನೆ ನೀಡಲಾಯಿತು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಮೂಲಗಳು ಎಥೆಫೋನ್‌ನ ದುರುಪಯೋಗ ಇತ್ತೀಚೆಗೆ ಹೆಚ್ಚಾಗಿದೆ. 



ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯಿದೆ. ಈ ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಅಥವಾ ಸ್ವಚ್ಛಗೊಳಿಸದೆ ಸೇವಿಸುವವರಿಗೆ ನಿಧಾನವಾಗಿ ಹಲವು ಕಾಯಿಲೆಗಳು ಬರುತ್ತಿವೆ ಎಂದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget