ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಜ್ಞೇಶ್ವರ ಇರಂತಕಜೆ ಅವಿರೋಧ ಆಯ್ಕೆ
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನಲ್ಲಿ ರಾಮಚಂದ್ರ ಪ್ರಭು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಜ್ಞೇಶ್ವರ ಇರಂತಕಜೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸಲು ನ.12 ಕೊನೆಯ ದಿನವಾಗಿತ್ತು. ಮತ್ತು ಇಂದು (ನ.13) ನಾಮಪತ್ರ ಪರಿಶೀಲನೆಯ ದಿನವಾಗಿತ್ತು. ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇದ್ದ ಕಾರಣ ಮತ್ತು ಇಂದು ನಡೆದ ನಾಮಪತ್ರ ಪರಿಶೀಲನೆಯ ವೇಳೆ ಯಜ್ಞೇಶ್ವರ ರವರ ನಾಮಪತ್ರ ಸಿಂಧುಗೊಂಡ ಕಾರಣ ಅವಿರೋಧವಾಗಿ ಆಯ್ಕೆಯಾದರು. ಯಜ್ಞೇಶ್ವರರವರ ಕೃಷಿಕರಾಗಿದ್ದು, ನಾರ್ಣಕಜೆ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ಉಪಾಧ್ಯಕ್ಷೆ ವಂದನಾ ಹೊಸ್ತೋಟ, ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ ಹರ್ಲಡ್ಕ, ನೆಲ್ಲೂರು ಕೆಮ್ರಾಜೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ವೇಣುಗೋಪಾಲ ಮಂದ್ರಪ್ಪಾಡಿ, ಬೂತ್ ಸಮಿತಿ ಅಧ್ಯಕ್ಷ ವಿನಯಚಂದ್ರ ಸುಳ್ಳಿ, ಹಿಂದು ಜಾಗರಣಾ ವೇದಿಕೆ ಸುಳ್ಯ ತಾಲೂಕು ಸಂಚಾಲಕ ಹರಿಪ್ರಸಾದ್ ಬಿ.ವಿ. ಮತ್ತಿತರರಿದ್ದರು.
Post a Comment