ದೀಪಾವಳಿ ಬೆಳಕಿನ ಹಬ್ಬ, ಪಟಾಕಿ ಸಿಡಿಸಿ ಸಂಭ್ರಮಿಸುವುದರ ಜೊತೆಗೆ ಮನೆಯಲ್ಲಿ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿ ಜೊತಣಕೂಟ ಮಾಡುತ್ತಾರೆ.
ಮಾರುಕಟ್ಟೆಯಿಂದ ತರಕಾರಿ, ಮೀನು,ಮಾಂಸಗಳನ್ನು ಜನ ಖರೀದಿ ಮಾಡುತ್ತಿದ್ದಾರೆ.ಇದರ ಜೊತೆಗೆ ಕಡಬದಲ್ಲಿ ಔಷಧೀಯ ಗುಣವುಳ್ಳ ಮಡೆಂಜಿ ಮೀನು ಭರ್ಜರಿ ಸೇಲಾಗಿದೆ.
ಕಡಬ ಸಮೀಪದ ನೆಟ್ಟಣ ಬೈಲಿನಲ್ಲಿರುವ ನಿತಿನ್ ಗೌಡ ನೆಟ್ಟಣ ಮಾಲಕತ್ವದ ಶ್ರೀ ಹರಿ ಫಿಶ್ ಫಾರ್ಮಿನಿಂದ ಹಿಡಿದ ಮೀನುಗಳು ಲಭ್ಯವಾಗಿದ್ದು ಜನರು ಮುಗಿಬಿದ್ದು ಖರೀದಿ ಮಾಡಿದ್ದಾರೆ.
ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ಒಂದೇ ದಿನದಲ್ಲಿ ನಲ್ವತ್ತು ಕೆ.ಜಿಯಷ್ಟು ನಷ್ಟು ಮಡೆಂಜಿ ಮೀನುಗಳು ಮಾರಾಟವಾಗಿದೆ.
ಕಡಬ ಸೇರಿದಂತೆ ಮರ್ದಾಳ, ಬೆಳಿನೆಲೆ, ಕೈಕಂಬದ ಸುತ್ತ ಮುತ್ತ ವಾಹನದ ಮೂಲಕ ಮಾರಾಟ ಮಾಡಲಾಗಿದ್ದು ಇತರ ದಿನಗಳಲ್ಲಿ ಭಾನುವಾರ ಮಾತ್ರ ಈ ಮಡೆಂಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ.
ಮೀನು ಸಾಕಾಣಿಕೆಗೆ ಮಾಜಿ ಸಚಿವ ಎಸ್.ಅಂಗಾರರ ಸ್ಫೂರ್ತಿ ತುಂಬಿದ ಮಡೆಂಜಿ ಮೀನನ ಕಥೆ!!
ಸುಳ್ಯದ ಮಾಜಿ ಸಚಿವ ಎಸ್. ಅಂಗಾರ ಅವರು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾಗಿದ್ದ ವೇಳೆ ಪುತ್ತೂರು ತಾಲೂಕಿನ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆದ 'ಒಳನಾಡು ಮೀನುಗಾರಿಕೆ - ಅವಕಾಶಗಳು ಮತ್ತು ಸವಲತ್ತುಗಳು' ವಿಷಯದ ಕಾರ್ಯಾಗಾರದಲ್ಲಿ ಪೈಲ್ಸ್ (ಮೂಲವ್ಯಾಧಿ)ಗೆ ಮಡೆಂಜಿ ಮೀನಿನ ಗಂಜಿ ಉತ್ತಮ ಔಷಧ ಎಂದು ಮಡೆಂಜಿ ಮೀನ ಕತೆ ವಿವರಿಸಿದ್ದರು.
ಪೈಲ್ಸ್ ಸಮಸ್ಯೆಗೆ ತುತ್ತಾದಾಗ ನನ್ನ ಅಜ್ಜಿ ಮಡೆಂಜಿ ಮೀನಿನ ಗಂಜಿ ನೀಡಿದ್ದರು. ಮಡೆಂಜಿ ಮೀನನ್ನು ಹಿಡಿದು ತಂದು ನೆಲದ ಮೇಲೆ ಬೆಳ್ಳಿಗೆ ಅಕ್ಕಿಯ ಮೇಲೆ ಬಿಡಬೇಕು. ಸಾಕಷ್ಟು ಹೊತ್ತು ಪ್ರಾಣ ಸಂಕಟದಿಂದ ಅಕ್ಕಿಯ ಮೇಲೆ ಹೊರಳಾಡಿ ಮೀನು ಸಾಯುತ್ತದೆ.
ಬಳಿಕ ಮೀನಿನ ಮೇಲೆ ಅಂಟಿಕೊಂಡ ಅಕ್ಕಿಯನ್ನು ತೆಗೆದು ಗಂಜಿ ಮಾಡಿ ಉಪ್ಪು, ಅರಿಶಿನ ಸೇರಿಸಿ ಸೇವಿಸಬೇಕು. ಈ ರೀತಿ ಒಂದಷ್ಟು ಸಮಯ ನನಗೆ ಅಜ್ಜಿ ಮಾಡಿಕೊಟ್ಟಿದ್ದರು. ಆಮೇಲೆ ಮತ್ತೆಂದೂ ಆ ಸಮಸ್ಯೆ ನನಗೆ ಕಾಡಿಲ್ಲ ಎಂದಿದ್ದರು.
ಇದರಿಂದ ಸ್ಫೂರ್ತಿ ಪಡೆದ ನಿತಿನ್ ನೆಟ್ಟಣ ಅವರು ಅವರು ಮೀನು ಸಾಕಾಣಿಕೆಗೆ ಮುಂದಾಗಿದ್ದಾರೆ. ಪ್ರಸ್ತುತ ಇವರ ಬಳಿ 1000 ಕ್ಕೂ ಹೆಚ್ಚು ಮೀನು ಮರಿಗಳಿವೆ, ಮಾರುಕಟ್ಟೆಯಲ್ಲಿ ದೀಪಾವಳಿ ಸಮಯದಲ್ಲಿ ಕೆ.ಜೆ ಗೆ 500 ರೂ ನಂತೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Post a Comment