ಇಂದು ಒಕ್ಕಲಿಗ ಗೌಡ ಸೇವಾವಾಹಿನಿ ವತಿಯಿಂದ ನೂತನ ಮನೆ ನಿರ್ಮಾಣಕ್ಕೆ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ

 ಮನೆ ಕಳೆದುಕೊಂಡ  ನಿರಾಶ್ರಿತರಿಗೆ ನೆರವಿನ ಹಸ್ತ 


ಸಮಾನ ಮನಸ್ಕ ಒಕ್ಕಲಿಗ ಯುವಕರು ಸಮಾಜದ ಕಡುಬಡತನ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆಯ ನೆರವಾಗುವ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ., ಕರ್ನಾಟಕ. ಟ್ರಸ್ಟ್ ನ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನ.16ರಂದು ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಒಕ್ಕಲಿಗ ಸಮಾಜದ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ ಪಾಂಬಾರು ತೀರ್ಥರಾಮ ಗೌಡರ ಮನೆಯು ಕಳೆದ ಬಾರಿಯ ಮಳೆಗಾಲದಲ್ಲಿ ಬಾರಿ ಮಳೆಗೆ ನೆಲಸಮ ಆಗುವ ಹಂತದಲ್ಲಿದ್ದು



ಪ್ರಸ್ತುತ ಆ ಮನೆಯಲ್ಲಿ ವಾಸ ಮಾಡಲು ಅಸಾಧ್ಯವಾಗಿದ್ದು, ಅವರಿಗೆ ನೂತನ ಮನೆ ನಿರ್ಮಾಣಕ್ಕೆ ಕೆಂಪುಕಲ್ಲನ್ನು ಸೇವಾ ವಾಹಿನಿಯು ನೀಡಲು ಮುಂದಾಗಿದ್ದು ಅದರಂತೆ 2500 ಕೆಂಪುಕಲ್ಲನ್ನು ನೂತನ ಮನೆ ನಿವೇಶನಕ್ಕೆ ಪೂರೈಸಿದೆ. ಇದರ ಸಾಂಕೇತಿಕ ಹಸ್ತಾಂತರ ಕಾರ್ಯಕ್ರಮ ನವೆಂಬರ್ 16 ರಂದು ಸಂಜೆ 4 ಗಂಟೆಗೆ ಜರಗಲಿದೆ.

ಒಕ್ಕಲಿಗ ಸಮಾಜದ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ಸಮಾನಮನಸ್ಕ ದಾನಿಗಳ ನೆರವಿನೊಂದಿಗೆ ತಲಾ 6000 ರೂಪಾಯಿಗಳ ಸಹಾಯಹಸ್ತದ ಸಂಗ್ರಹದೊಂದಿಗೆ ಸೇವಾ ವಾಹಿನಿ ಈ ಚೊಚ್ಚಲ ಕಾರ್ಯಕ್ರಮ ಆಯೋಜಿಸಿದೆ. ಎರಡನೇ ನೆರವಿನ ಹಸ್ತವಾಗಿ ಮುಂದಿನ ತಿಂಗಳು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಗೌಡರಿಗೆ ನೀಡಲು ಮುಂದಾಗಿದೆ ಎಂದು ಸೇವಾವಾಹಿನಿಯ ಮೂಲಗಳು ತಿಳಿಸಿವೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget