ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಜನರಲ್ಲಿ ಯಾರಿಗಾದರೂ ಪಾರ್ಶ್ವವಾಯು ಅಥವಾ ಸ್ಟೋಕ್ #Stroke ಸಂಭವಿಸಿದರೆ ಹೆದರದೇ, ಅತ್ಯುತ್ತಮ ಚಿಕಿತ್ಸೆ ಲಭ್ಯವಿರುವ ಸರ್ಜಿ ಆಸ್ಪತ್ರೆಗೆ #sarjihospital ಭೇಟಿ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಜಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಮೆಡಿಕಲ್ ಹಬ್ #MedicalHub ಆಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಪಾರ್ಶ್ವವಾಯು ಸಮಸ್ಯೆಗೆ ಸರ್ಜಿ ಸೂಪರ್ ಸ್ಪೆಷಾಲಿಟಿಯಲ್ಲಿ ವಿಶೇಷ ಚಿಕಿತ್ಸೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ನಾಟಿ ಔಷಧಿಯನ್ನು ನಾವು ದೂಷಿಸುವುದಿಲ್ಲ.
ಆದರೆ ನಾಟಿ ಔಷಧಿಗೆ ಹೋಗುವ ಬದಲು ಈ ಚಿಕಿತ್ಸೆ ಪಡೆದರೆ ರೋಗಿ ಓಡಾಡುವಷ್ಟು ಫಲಿತಾಂಶ ಸಿಕ್ಕಿದೆ.
ಚಿಕಿತ್ಸೆ ಪಡೆದರೆ ಸಾಯುವುದರಿಂದ ರೋಗಿಯನ್ನು ರಕ್ಷಣೆ ಮಾಡಬಹುದು ಎಂದರು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾಯ್ಲಿಂಗ್ #Coiling ಚಿಕಿತ್ಸಾ ಪದ್ಧತಿಯನ್ನು ಆರಂಭಿಸಲಾಗಿದೆ.
ಮಧ್ಯ ಕರ್ನಾಟಕ ಭಾಗದಲ್ಲೇ ಇದೇ ಮೊದಲ ಬಾರಿಗೆ ಈ ಚಿಕಿತ್ಸೆ ಆರಂಭಿಸಲಾಗಿದೆ. ನ್ಯೂರೋಸರ್ಜನ್, ಡಾ.ಹರೀಶ್, ನ್ಯೂರೋ ಫಿಜಿಷಿಯನ್ ಡಾ.ಪ್ರಶಾಂತ್, ಡಾ.ವಾದಿರಾಜ್ ಮತ್ತು ತಂಡ ಅವರಂತಹ ನುರಿತ ತಜ್ಞರಿಂದ ಚಿಕಿತ್ಸೆ ಪಡೆಯಬಹುದಾಗಿದೆ. ಬೆಂಗಳೂರಿಗೆ ಹೋಲಿಸಿದರೆ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ನರರೋಗ ತಜ್ಞ ಡಾ.ಪ್ರಶಾಂತ್ ಮಾತನಾಡಿ, ರಕ್ತ ಸ್ರಾವ, ರಕ್ತನಾಳದ ಗೊಂಚಲುಗಳಿಂದ ನರಳಾಡುತ್ತಿದ್ದರೆ, ಸ್ಟೋಕ್ ಆದವರಿಗೆ ಸೂಜಿ ಇಲ್ಲದೆ ಚಿಕಿತ್ಸೆ ಮಾಡಬೇಕಾಗುತ್ತದೆ. ಕಾಯ್ಲಿಂಗ್ ಚಿಕಿತ್ಸೆಯಿಂದ ಓಪನ್ ಚಿಕಿತ್ಸೆಯ ಭಯವಿರಲ್ಲ. ನೋವು ಸಹ ಇರುವುದಿಲ್ಲ. ಒಂದೇ ಚಿಕಿತ್ಸೆಯಿಂದ ಎರಡು ಚಿಕಿತ್ಸೆಯ ಲಾಭವಾಗುತ್ತದೆ ಎಂದರು.
ಸ್ಟೋಕ್ ಆದಾಗ ಎರಡು ಗಂಟೆಯ ಸಮಯ ತುಂಬ ಮಹತ್ವದ ಗಂಟೆಯಾಗಿರುತ್ತದೆ. ತಡ ಮಾಡದೇ ತಕ್ಷಣವೇ ಆಸ್ಪತ್ರೆಗೆ ಕರೆತಂದರೆ ಸ್ಟೋಕ್ ಇಲ್ಲದೆ ನಾರ್ಮಲ್ ಆಗುವಂತೆ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಗುಣಪಡಿಸಬಹುದು ಎಂದರು.
ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿ ಪುರುಷೋತ್ತಮ ಇದ್ದರು.
Post a Comment