ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪೊಳೆಂಜ ಮಿತ್ರಾನೆ ಅಣ್ಣಪ್ಪ ಸುಶೀಲ ದಂಪತಿಗಳ ಮನೆಯಲ್ಲಿ ಸಾಮರಸ್ಯ ತುಡರ್ ದೀಪಾವಳಿ ಆಚರಣೆ ನಡೆಯಿತು.
ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದಿಂದ ಪ್ರಜ್ವಲಿಸಿದ ದೀಪವನ್ನು ಭಜನೆ,ಶಂಕ,ಜಾಗಟೆ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಪಂಜ ಸುತ್ತಮುತ್ತಲಿನ ಹಿಂದೂ ಬಾಂಧವರು ಸಾಮರಸ್ಯದ ತುಡರ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಾಮರಸ್ಯ ತುಡರ್ ಕಾರ್ಯಕ್ರಮದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿನೋದ್ ಬೊಲ್ಮಲೆ ಮಾತನಾಡಿದರು. ವೇದಿಕೆಯಲ್ಲಿ ಮನೆಯ ಗುರಿಕಾರ ಅಣ್ಣಪ್ಪ ಮತ್ತು ನಿವೃತ್ತ ಸೈನಿಕ ದಾಮೋದರ ಪಲ್ಲೊಡಿ ಉಪಸ್ಥಿತರಿದ್ದರು.
ಪ್ರಕಾಶ್ ಜಾಕೆ ಕಾರ್ಯಕ್ರಮ ನಿರೂಪಿಸಿದರು.
ನಂತರ ಅಲ್ಲಿನ ಬಂಧುಗಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸಿದರು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Post a Comment