ಆವೆ ಅಂಕಣದ ಸಾಮ್ರಾಟ (ಕಿಂಗ್ ಆಫ್ ಕ್ಷೇ) ಎಂದೇ ಜನಪ್ರಿಯರಾಗಿರುವ ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್ ನಡಾಲ್, ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ನಡಾಲ್ ಮೊದಲೇ ಘೋಷಿಸಿದಂತೆ ಡೇವಿಸ್ ಕಪ್‌ನಲ್ಲಿ ಸ್ಪೇನ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದಾರೆ.
ಮಲಾಗ (ಸ್ಪೇನ್): ಆವೆ ಅಂಕಣದ ಸಾಮ್ರಾಟ (ಕಿಂಗ್ ಆಫ್ ಕ್ಷೇ) ಎಂದೇ ಜನಪ್ರಿಯರಾಗಿರುವ ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್ ನಡಾಲ್, ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ನಡಾಲ್ ಮೊದಲೇ ಘೋಷಿಸಿದಂತೆ ಡೇವಿಸ್ ಕಪ್‌ನಲ್ಲಿ ಸ್ಪೇನ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದಾರೆ. ಕೊನೆಯ ಸಿಂಗಲ್ಸ್‌ನಲ್ಲಿ ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡೆ ಝಾಂಡ್‌ಸ್ಕಲ್ ವಿರುದ್ಧ ನಡಾಲ್ 64, 6 4ರ ಅಂತರದಲ್ಲಿ ಸೋಲನುಭವಿಸಿದರು.
ಇದರೊಂದಿಗೆ ಡೇವಿಸ್ ಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿರುವ ಸ್ಪೇನ್ ಹೋರಾಟವು ಅಂತ್ಯಗೊಂಡಿತು.
ಮತ್ತೊಂದು ಸಿಂಗಲ್ಸ್‌ನಲ್ಲಿ ಕಾರ್ಲೊಸ್ ಅಲ್ಕರಾಜ್ ಗೆದ್ದರೂ ಡಬಲ್ಸ್‌ನಲ್ಲಿ ಸೋತಿರುವುದು ಸ್ಪೇನ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ಪರಿಣಾಮ 1-2ರ ಅಂತರದಲ್ಲಿ ಪರಾಭವಗೊಂಡಿತು.
ನಡಾಲ್ ಈ ವೇಳೆ ಭಾವುಕರಾಗಿ ಕಂಡುಬಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಟೆನಿಸ್‌ಗೆ ವಿದಾಯ ಹೇಳಿರುವ ನಡಾಲ್ ಅವರನ್ನು ಕೊಂಡಾಡಿದ್ದಾರೆ.
23 ವರ್ಷಗಳ ಟೆನಿಸ್ ಬದುಕಿನಲ್ಲಿ ನಡಾಲ್ 22 ಟ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಪೈಕಿ 14 ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸತತ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ 38 ವರ್ಷದ ನಡಾಲ್ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು.
Post a Comment