ಆರೋಪಿ ವಿದ್ಯಾಧರ್ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಿ - ಮಾಜಿ ಶಾಸಕ ಕೆ ಜಿ ಬೋಪಯ್ಯ ಒತ್ತಾಯ
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಘಟನೆಯ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಬೋಪಯ್ಯ,
ಸಮಾಜದಲ್ಲಿ ಬಹಳ ದೊಡ್ಡ ಹೊಣೆಗಾರಿಕೆ, ಘನತೆ, ಗೌರವ ಹೊಂದಿರುವ ವಕೀಲ ವೖತ್ತಿಯಲ್ಲಿರುವಾತನೇ ಇಂಥ ಕೖತ್ಯ ಮಾಡಿದ್ದು ವಿಷಾಧನೀಯ
ಈ ವಕೀಲನ ವಿರುದ್ದ ಮಡಿಕೇರಿ ವಕೀಲರ ಸಂಘ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ ಬೋಪಯ್ಯ
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರನಿಕಾಳಪ್ಪ ಮಾತನಾಡಿ, ಆರೋಪಿಯನ್ನು ಕೊಡಗು ಜಿಲ್ಲೆಯಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದರು, ಜಿಲ್ಲೆಯ ಶಾಸಕದ್ವಯರು ಘಟನೆ ಸಂಬಂಧಿತ ಖಂಡನೆಗೆ ಮಾತ್ರ ಸೀಮಿತವಾಗದೇ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿಯೂ ಸೂ್ಕ್ಕ ಕ್ರಮಕ್ಕೆ ಆಸಕ್ತಿ ವಹಿಸುವಂತೆಯೂ ರವಿಕಾಳಪ್ಪ ಆಗ್ರಹಿಸಿದರು,
ಜಿಲ್ಲಾ ಬಿಜೆಪಿ ಪ್ರಧಾನ ಕಾಯ೯ದಶಿ೯ ಮಹೇಶ್ ಜೈನಿ, ನೆಲ್ಲೀರ ಚಲನ್, ಜಿಲ್ಲಾ ವಕ್ತಾರ ಬಿ ಕೆ ಅರುಣ್ ಕುಮಾರ್ ಮಡಿಕೇರಿ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ ಸುದ್ದಿಗೋಷ್ಟಿಯಲ್ಲಿದ್ದರು,
Post a Comment