ಸುಳ್ಯ : ಅತೀವವಾದ ಮಳೆಯಿಂದ ಕೊಳೆರೋಗ ಹಾಗೂ ಹಳದಿರೋಗ ಸಹಿತ ರೈತರು ಕಂಗಾಲಾಗಿದ್ದು ಈ ಸಂದರ್ಭದಲ್ಲಿ ರೈತರಿಗೆ ಅನುಕೂಲಕರವಾಗುವಂತೆ ಕೇಂದ್ರ ಸರಕಾರ ವಿಮೆ ಯೋಜನೆಯನ್ನು ಜಾರಿಗೆ ತಂದು ಚುನಾವಣೆ ಬಂದ ಹಿನ್ನೆಲೆಯಲ್ಲಿ ಒಂದಿಷ್ಟು ಗೊಂದಲಗಳು ಹಾಗೂ ರೈತರ ಆಕ್ರೋಶದ ಬಳಿಕ ಅಡಿಕೆ ಮತ್ತು ಇತರೆ ಬೆಳೆಗಳಿಗೆ ವಿಮೆಯನ್ನು ಜಾರಿಗೊಳಿಸಿತ್ತು. ಇದೀಗ ರೈತರ ಖಾತೆಗಳಿಗೆ ಪ್ರೀಮಿಯಂ ಕಟ್ಟಿದ ಮೊತ್ತದ ಹತ್ತು ಪಟ್ಟು ಹೆಚ್ಚಳವಾಗಿ ಎಕರೆಗೆ ಸರಿ ಸುಮಾರು ಇಪ್ಪತೈದು ಸಾವಿರದಷ್ಟು ಮೊತ್ತವು ರೈತರ ಖಾತೆಗಳಿಗೆ ಜಮೆ ಆಗುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Post a Comment