ರಸ್ತೆಯಲ್ಲಿ ಗುಂಡಿಗಳಿರುವ ಕಾರಣ ಪ್ರಯಾಣಿಕರು ನಿಧಾನವಾಗಿ ಎಚ್ಚರಿಕೆಯಿಂದ ಚಲಿಸಿ ಎಂದು ಹಾಕಿದ ಬ್ಯಾನರ್ ಈಗ ಫುಲ್ ವೈರಲ್ ಆಗಿದೆ.
ವಿಶೇಷ ಏನಂದ್ರೆ ಆ ಬ್ಯಾನರ್ ನಲ್ಲಿ ಬರೆದಿರುವ ಲೇಖನ..ಹೌದು ಆ ಲೇಖನ ದಿಂದಲೇ ಈ ಬ್ಯಾನರ್ ವೈರಲ್ ಆಗ್ತಿರೋದು. ರಸ್ತೆ ಬದಿಯ ಕಂಬದಲ್ಲಿ ಅಳವಡಿಸಲಾದ ಈ ಬ್ಯಾನರ್ ನಲ್ಲಿ ಎಚ್ಚರಿಕೆ ಫಲಕ ಎಂದು ಶೀರ್ಷಿಕೆ ಹಾಕಿ ಅದರಲ್ಲಿ “ಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರಕಾರ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ.” ನಿಧಾನವಾಗಿ ಚಲಿಸಿ ಎಂದು ಬರೆಯಲಾಗಿದೆ.
Post a Comment