ಬೆಂಗಳೂರು: ವಿಧಾನ ಸೌಧದಲ್ಲಿ ನಡೆದ ನೀಟ್ ಆನ್‌ಲೈನ್ ಕೋಚಿಂಗ್ ತರಗತಿ ತರಬೇತಿ ಉದ್ಘಾಟನಾ ಕಾರ್ಯಕ್ರಮ ವೇಳೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಗೆಪಾಟಲಿಗೀಡಾದ ಘಟನೆ ನಡೆದಿದೆ.
ಬುಧವಾರ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಮಧು ಬಂಗಾರಪ್ಪಗೆ ಕನ್ನಡ ಬರಲ್ಲ ಎಂದು ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಮೊದಲಿಗೆ ಏಯ್ ಯಾರೋ ಅವನೋ, ಏನೀಗ ಉರ್ದುವಿನಲ್ಲಿ ಮಾತಾಡ್ತಾ ಇದ್ದೀನಿ, ಟಿವಿಯವರು ಅದನ್ನೇ ಹಾಕೊಂಡು ಹೊಡಿತಾರೆ ಎಂದು ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡು ಆ ಬಳಿಕ ಗರಂ ಆದ ಪ್ರಸಂಗವೂ ನಡೆಯಿತು.
ಹಾಗೆ ಹೇಳಿದವನ ವಿರುದ್ಧ ಕ್ರಮ ತೆಗೆದುಕೊಳ್ಳಿ:
ಯಾರು ಅದು ಕನ್ನಡ ಬರಲ್ಲ ಅಂತ ಹೇಳಿದ್ದು, ರೆಕಾರ್ಡ್ ಮಾಡಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ, ನಾಚಿಕೆ ಆಗಬೇಕು ಅವನಿಗೆ ಎಂದು ಯಾರು ಟೀಚರ್, ಬಿಇಒ ಯಾರು ಇದ್ದರೋ ಇದನ್ನು ಗಂಭೀರವಾಗಿ ಪರಿಗಣಿಸಿ ನೀವು ಅವನ ವಿರುದ್ಧ ಕ್ರಮ ಕೈಗೊಳ್ಳಿ, ಹಾಗೆ ಯಾರು ಹೇಳಿದ್ದು ಮಾಹಿತಿ ತೆಗೆದುಕೊಳ್ಳಿ. ಆತನನ್ನು ಸುಮ್ಮನೆ ಬಿಡಬೇಡಿ, ಏನು ಅಂತಾ ವಿಚಾರಿಸಿ ಕೇಳಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್‌ಗೆ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ.
Post a Comment