ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ, ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳು, ಹಿಂದು ಜನರ ಮೇಲೆ ಹಲ್ಲೆ, ದಬ್ಬಾಳಿಕೆ ಮುಂದುವರೆದಿದೆ. ಹಿಂದು ಸಮಾಜದ ಪ್ರಮುಖರನ್ನು ಬಂಧಿಸಲಾಗುತ್ತಿದೆ.
ಮಂಗಳೂರು, ನ.28: ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್
ಮೂಲಭೂತವಾದಿ ಜಿಹಾದಿಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ, ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳು, ಹಿಂದು ಜನರ ಮೇಲೆ ಹಲ್ಲೆ ದಬ್ಬಾಳಿಕೆ ಮುಂದುವರೆದಿದೆ. ಹಿಂದು ಸಮಾಜದ ಪ್ರಮುಖರನ್ನು ಬಂಧಿಸಲಾಗುತ್ತಿದೆ. ಇಂತಹ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ನ.29ರಂದು ವಿಶ್ವ ಹಿಂದು ಪರಿಷತ್ ಪ್ರತಿಭಟನೆ ನಡೆಸಲಿದೆ.
ಹಿಂದುಗಳ ಮೇಲಿನ ಹಲ್ಲೆ ಕೃತ್ಯವನ್ನು ತಡೆಯಲು ಸರಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಇವುಗಳನ್ನು ವಿರೋಧಿಸಿ ಹಿಂದೂ ಸಮಾಜವು ಢಾಕಾ, ಚಿತ್ತಗಾಂಗ್ ಮೊದಲಾದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದೆ. ವಿಶ್ವ ಸಮುದಾಯ ಮತ್ತು ಭಾರತ ಸರ್ಕಾರ ನಿರೀಕ್ಷೆಯಂತೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭದ್ರತೆ ಮತ್ತು ಸಂಘಟನೆಗಾಗಿ ಹಿಂದೂ ಸಮಾಜವನ್ನು ಜಾಗೃತಗೊಳಿಸಿದ ನಾಯಕ ಚಿನ್ನೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ.
ಹಿಂದೂ ನಾಯಕನ ಬಿಡುಗಡೆಗೆ ಒತ್ತಾಯಿಸಿ ಹಾಗೂ ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಹಾಗೂ ಬಂಧನವಾಗಿರುವ ಧಾರ್ಮಿಕ ಮುಖಂಡನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಘಟಕದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.
ಚಿನ್ನೊಯ್ ಕೃಷ್ಣದಾಸ್ ಪ್ರಭು ಅವರ ಚಿತ್ರದೊಂದಿಗೆ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕೊನೆಗಾಣಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು ಎಂದು ಪ್ರತಿಭಟನೆ ಸ್ವರೂಪದ ಬಗ್ಗೆ ಶರಣ್ ಪಂಪೈಲ್ ತಿಳಿಸಿದ್ದಾರೆ.
Post a Comment