ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ!! ಭಕ್ತರಿಗೆ ಸಿಹಿ ಸುದ್ದಿನೀಡಿದ ಆಂದ್ರ ಸರ್ಕಾರ



 ತಿರುಪತಿ ತಿಮ್ಮಪ್ಪ ಸ್ವಾಮಿಯ ದರ್ಶನಕ್ಕೆ ಪ್ರತಿನಿತ್ಯ ಸಾಗರೋಪಾದಿಯಲ್ಲಿ ಭಕ್ತರು ಬರುವ ಕಾರಣ ಸಾಕಷ್ಟು ಭಕ್ತರಿಗೆ ತಿಮ್ಮಪ್ಪನ ದರ್ಶನ ಆಗುವ ವೇಳೆಗೆ ಜೀವ ಬಾಯಿಗೆ ಬಂದು ಬಿಟ್ಟಿರುತ್ತದೆ. ಕೆಲವೊಮ್ಮೆ ದೇವರ ದರ್ಶನವಾಗದೆ ಹಿಂದಿರುಗಬೇಕಾಗುತ್ತದೆ. ಸದ್ಯ, ಈ ಎಲ್ಲ ಸಮಸ್ಯೆಗಳನ್ನು ಅರಿತಿರುವ ಆಂಧ್ರ ಸರ್ಕಾರ ಹೊಸದೊಂದು ತೀರ್ಮಾನಕ್ಕೆ ಬಂದಿದ್ದು, ಇದು ತಿಮ್ಮಪ್ಪನ ಭಕ್ತರಿಗೆ ತಿರುಪತಿ ಲಡ್ಡುವಿನಷ್ಟೇ ಸಿಹಿ ಸುದ್ದಿಯಾಗಲಿದೆ.

ತಿರುಪತಿ ತಿಮ್ಮಪ್ಪ ದೇಗುಲದ ಆಡಳಿತ ಮಂಡಳಿಯು ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ದರ್ಶನ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದೆ. ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ಇನ್ಮುಂದೆ ಭಕ್ತರು 2ರಿಂದ 3 ಗಂಟೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ಮರಳ ಬಹುದಾಗಿದೆ.ಹತ್ತಾರು ಬದಲಾವಣೆ ತಂದ ಆಂಧ್ರ ಸರ್ಕಾರ! ಇತ್ತೀಚೆಗೆ ಟಿಟಿಡಿ ಲಡ್ಡು ವಿಚಾರದಲ್ಲಿ ಸಾಕಷ್ಟು ದೊಡ್ಡ ಚರ್ಚೆಯಾದ ಬಳಿಕ ಆಂಧ್ರ ಸರ್ಕಾರ ಹಲವು ಬದಲಾವಣೆ ತರಲು ಚಿಂತನೆ ನಡೆಸಿದೆ.

ದೇಗುಲದಲ್ಲಿ ಅನ್ಯಕೋಮಿನ ಉದ್ಯೋಗಿಗಳಿಗೆ ಕೋಕ್ ನೀಡಲಾಗಿದೆ. ಜೊತೆಗೆ ವಿಐಪಿ ದರ್ಶನವನ್ನು ಕೂಡ ರದ್ದು ಮಾಡಲು ಚಿಂತನೆ ನಡೆಸಿದೆ. ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಅನುಕೂಲವಾಗುವ ರೀತಿಯ ಹಲವು ಬದಲಾವಣೆಗಳನ್ನು ಆಂಧ್ರ ಸರ್ಕಾರ ಇದೀಗ ಜಾರಿಗೊಳಿಸುತ್ತಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget