ಕನ್ನಡಾಂಬೆ ಚಿತ್ರಕ್ಕೆ ನಮಿಸಲು ಭಟ್ಕಳ ಪ.ಪಂ. ಅಧ್ಯಕ್ಷೆ ನಕಾರ!

 


ರಾಜ್ಯಾದ್ಯಂತ ನವೆಂಬರ್‌1ರಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ಜರುಗಿತು. ಆದರೆ, ಓರ್ವ ಮಹಿಳಾ ಜನಪ್ರತಿನಿಧಿಯೇ ಕನ್ನಡದ ಭುವನೇಶ್ವರಿ ದೇವಿಗೆ ನಮನ ಸಲ್ಲಿಸಲು ನಿರಾಕರಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾ ಯಿತಿ ಅಧ್ಯಕ್ಷೆ ಖಾಜೀಯಾ ಅಪ್ಪಾ ಹುಜೈಫಾ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ಹಿಂದೇಟು ಹಾಕಿದರು.






ಬೆಳಗ್ಗೆ ಭಟ್ಕಳ ಉಪವಿಭಾಗಾಧಿ ಕಾರಿ ಡಾ.ನಯನಾ ಧ್ವಜಾರೋಹಣ ನೆರವೇರಿಸಿದ ಬಳಿಕ ಸಮಾರಂಭದಲ್ಲಿದ್ದ ಎಲ್ಲ ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.






ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅವರು ಪುಷ್ಪನಮನ ಸಲ್ಲಿಸಲು ಖಾಜೀಯಾ ಅವರಿಗೆ ತಿಳಿಸಿದರು. 





ಆದರೆ, ಕನ್ನಡಾಂಬೆಗೆ ನಮನ ಸಲ್ಲಿಸಲು ಖಾಜೀಯಾ ನಿರಾಕರಿಸಿದರು. ಡಾ.ನಯನಾ ಅವರು ಪುನಃ ಆಹ್ವಾನಿಸಿದ್ದರೂ ನಿರಾಕರಿಸಿ ದೂರ ಉಳಿದರು. 





ಅಧ್ಯಕ್ಷೆಯ ಈ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜನರಿಂದ ಆಯ್ಕೆಯಾದವರೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget