ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಅಚ್ಚ ಕನ್ನಡಿಗರೆ ಇರುವ ಗುಮಟಾಪುರ ರಾಜ್ಯ ಪುನರ್ ವಿಂಗಡೆಣೆ ಸಂದರ್ಭದಲ್ಲಿ ತಮಿಳುನಾಡಿಗೆ ಸೇರಿಹೋದ ಗ್ರಾಮ. ಪ್ರತಿವರ್ಷ ಇಲ್ಲಿ ಬಲಿಪಾಡ್ಯಮಿಯ ಮರುದಿನ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ವಯಸ್ಸು ಹಾಗೂ ಜಾತಿ ಬೇಧಬಾವವಿಲ್ಲದೆ ಗ್ರಾಮದ ಜನರೆಲ್ಲ ಸೇರಿ ಸಗಣಿಯಲ್ಲಿ ಹೊರಳಾಡಿ, ಒಬ್ಬರಿಗೊಬ್ಬರು ಹೊಡೆದಾಡುವುದು ಗೊರೆ ಹಬ್ಬದ ವಿಶೇಷ. ಸಗಣಿ ಅಂದ್ರೆ ಮಾರು ದೂರು ಹೋಗುವವರೇ ಹೆಚ್ಚು. ಆದರೆ ಇಲ್ಲಿನ ಜನ ಸಗಣಿಯಲ್ಲೇ ಬಿದ್ದು ಹೊರಳಾಡ್ತಾರೆ. ಅಷ್ಟಕ್ಕೂ ಈ ಹಬ್ಬದ ಆಚರಣೆ ಹೇಗಿರುತ್ತೆ ಅಂದ್ರೆ, ಹಬ್ಬದ ದಿನ ಬೆಳಿಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗು ಟ್ಯ್ರಾಕ್ಟರ್ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ. ಇದಾದ ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ ಹಣೆಗೆ ನಾಮ ಬಳಿದು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕತ್ತೆಯ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ.
Post a Comment