ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಾರ್ಷಿಕ ಮೇಳ



ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಸಹಯೋಗದೊಂದಿಗೆ ನ. 8 ಮತ್ತು 9ರಂದು ಎರಡು ದಿನದ ವಾರ್ಷಿಕ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜಿನ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಅರವಿಂದ ಅಯ್ಯಪ್ಪ ಸುತ ಗುಂಡಿ ಅವರು ವಹಿಸಿದರು. ಕಾರ್ಯಕ್ರಮವನ್ನು ಸುಳ್ಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಆಯುಕ್ತರಾದ ಮಹಮದ್ ತುಂಬೆ, ಕಾರ್ಯದರ್ಶಿ ಪ್ರತಿಮ್ ಕುಮಾರ್, ಎಂ ಜಿ ಕಜೆ ,ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ವಿಮಲಾ ರಂಗಯ್ಯ, ಸ್ಥಳೀಯ ಸಂಸ್ಥೆಯ ಏ ಡಿ ಸಿ ದೇವಿಪ್ರಸಾದ್ ಜಾಕೆ, ಸಂಸ್ಥೆಯ ಪ್ರಾಂಶುಪಾಲ ಡಾ.ದಿನೇಶ ಪಿ ಟಿ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜದ ಅಧ್ಯಕ್ಷ ಮಾಧವ ಬಿ.ಕೆ ಉಪಾಧ್ಯಕ್ಷರುಗಳಾದ ಸೋಮಶೇಖರ ನೇರಳ, ಬಾಲಕೃಷ್ಣ ಹೇಮಳ, ಕಾರ್ಯದರ್ಶಿ ಉದಯ್ ಕುಮಾರ್ ಬಾಳಿಲ, ರ‍್ಯಾಲಿಯ ಸಂಯೋಜಕರಾದ ಮನೋಹರ್ ಮತ್ತು ಪ್ರಮೀಳಾ ಎನ್, ಸ್ಕೌಟ್ ಗೈಡ್ ನಾಯಕರುಗಳಾದ ಅರವಿಂದ ಬಾಳಿಲ ಮತ್ತು ಸರೋಜಿನಿ ಕರಿಕಳ, ರ‍್ಯಾಲಿ ಯ ನಿರ್ದೇಶಕ ದಾಮೋದರ ನೇರಳ ಉಪಸ್ಥಿತರಿದ್ದರು. ತದ ನಂತರ ಸ್ಕೌಟರ್ ಗೈಡರ್ಸ್ ಗಳ ಸಮಾಲೋಚನಾ ಸಭೆ ನಡೆಯಿತು. ಸ್ಕೌಟ್ ಮತ್ತು ಗೈಡ್ಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಗೈಡ್ಸ್ ವಿಭಾಗಕ್ಕೆ ಹೊರ ಸಂಚಾರ ಮತ್ತು ಸ್ವಚ್ಛತಾ ಅಭಿಯಾನ ನಡೆಯಿತು. ಸ್ಕೌಟ್ ವಿಭಾಗಕ್ಕೆ ಸಾಹಸಮಯ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಸಂಜೆ ನಗರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಶ್ರೀ ಕಾರ್ತಿಕ್ ಇವರು ಉದ್ಘಾಟಿಸಿದರು. ರಾತ್ರಿ 6 ರಿಂದ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಶಿಬಿರಾಗ್ನಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ರಾಜೇಶ್ ಎನ್ ಎಸ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ನಾಯಕ್ ಉಪಸ್ಥಿತರಿದ್ದರು.ರಾತ್ರಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. 

ದಿನಾಂಕ 9 ರಂದು ಬೆಳಿಗ್ಗೆ ವ್ಯಾಯಮ ಮತ್ತು ಸರ್ವಧರ್ಮ ಪ್ರಾರ್ಥನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರು ಯಶವಂತ ರೈ ,ಧರ್ಮ ಗುರುಗಳಾದ ಫಾದರ್ ಹನಿ ಜೋಸೆಫ್ ನೆಟ್ಟಣ, ಕುರಾನ್ ಪಠಣಕ್ಕೆ ಮಹಮ್ಮದ್ ಜಾಕೀರ್ ಸಾಹೇಬ್ ಆಗಮಿಸಿ ತಮ್ಮ ಧರ್ಮಗಳ ಬಗ್ಗೆ ವಿವರಣೆಯನ್ನು ನೀಡಿದರು. ನಂತರ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

 ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜದ ಅಧ್ಯಕ್ಷರಾದ ಮಾಧವ ಬಿ.ಕೆ , ಕೆ.ಎಸ್.ಎಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಕೆ ರಂಗಯ್ಯ ಶೆಟ್ಟಿಗಾರ್ , ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ 

 ಲತಾ ಬಿ ಟಿ , ಜಿಲ್ಲಾ ಗೈಡ್ಸ್ ಆಯುಕ್ತರು ವಿಮಲಾ ರಂಗಯ್ಯ, ಸಂಸ್ಥೆಯ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಮನೋಹರ್, ರೋವರ್ ಲೀಡರ್ ರಾಮಪ್ರಸಾದ್ ಹಾಗೂ ರೇಂಜರ್ ಲೀಡರ್ ಶ್ರೀಮತಿ ಅಶ್ವಿನಿ ಎಸ್ ಎನ್, ಅರವಿಂದ ಬಾಳಿಲ, ಸರೋಜಿನಿ ಕರಿಕಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆ ಪಂಜದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಬಾಳಿಲ ವಂದಿಸಿದರು. ಧ್ವಜ ಅವರೋಹಣದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget