ಸರ್ಕಾರ ವಕ್ಫ್ ಕುರಿತ ಆದೇಶ ಹಿಂಪಡೆಯಲಿ: ವಿಶ್ವ ಹಿಂದೂ ಪರಿಷತ್​​ ಆಗ್ರಹ

 ವಕ್ಫ್ ಆಸ್ತಿ ಕುರಿತಂತೆ ಹೊರಡಿಸಲಾದ ಆದೇಶವನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.



ಬೆಂಗಳೂರು: ವಕ್ಫ್ ಹೆಸರಿನಲ್ಲಿ ಹಿಂದೂ ದೇವಸ್ಥಾನ, ಸಂಸ್ಥೆಗಳು, ರೈತರ ಜಮೀನು ಒಳಗೊಂಡಿದ್ದು, ಈ ಕುರಿತ ಆದೇಶವನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್​ ವತಿಯಿಂದ ನಡೆದ ಸಂತ ಸಮಾವೇಶದಲ್ಲಿ ನಿರ್ಣಯ ಕೈಗೊಂಡು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗಿದೆ.


ಶನಿವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ಸಂತ ಮಾರ್ಗದರ್ಶಕ ಮಂಡಳಿಯ ಸಮಾವೇಶ ನಡೆಯಿತು.


ಈ ಸಮಾವೇಶದಲ್ಲಿ, ಕರ್ನಾಟಕದಲ್ಲಿ ವಕ್ಫ್​ಗಾಗಿ ಹಿಂದೂಗಳ ಭೂಮಿಗಳನ್ನು ಪಡೆದು ಸಮಾಜಕ್ಕೆ ಕಿರುಕುಳ ಕೊಟ್ಟು ರಾಜ್ಯದಲ್ಲಿ ಸಾಮರಸ್ಯ ಕೆಡಲು ಕಾರಣರಾದ ಎಲ್ಲ ಹಂತದ ಅಧಿಕಾರಿಗಳು, ಆದೇಶ ಕೊಟ್ಟ ರಾಜಕಾರಣಿಗಳು ಮತ್ತು ಮಂತ್ರಿಗಳನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಿ, ಕಾನೂನನ್ನು ಉಲ್ಲಂಘಿಸಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವಕ್ಫ್‌ ಕುರಿತ ನೋಟೀಸ್ ಅನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

ಸರ್ಕಾರದ ನಿಯಂತ್ರಣದಿಂದ ದೇವಸ್ಥಾನ ಮುಕ್ತಿಗೊಳಿಸುವ ನಿರ್ಣಯ: ಸರ್ಕಾರ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ತಾನೇ ನೇಮಕಾತಿ ಮಾಡುವುದನ್ನು ನಿಲ್ಲಿಸಿ, ಹಿಂದೂ ಸಮಾಜದಿಂದಲೇ ನೇಮಕಗೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ದೇವಸ್ಥಾನದ ಚರ, ಸ್ಥಿರ, ಅಸ್ತಿಗಳ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣ ಮತ್ತು ಅಧಿಕಾರ ಇರಬಾರದು. ಅದರ ವಿಲೇವಾರಿಗೆ, ವಿನಿಯೋಗಕ್ಕೆ ಸರ್ಕಾರವು ಆದೇಶ ಕೊಡಬಾರದು. ದೇವಸ್ಥಾನದ ಎಲ್ಲಾ ಪಹಣಿ ಪತ್ರಗಳಲ್ಲಿ ದೇವಸ್ಥಾನದ ಸಮಸ್ತ ಭೂಮಿಯನ್ನು ದೇವರ ಹೆಸರಿಗೆ ಏಕ ಆದೇಶ ಕೊಟ್ಟು ನೋಂದಾಯಿಸಬೇಕು. ದೇವಸ್ಥಾನದ ಭೂಮಿಯನ್ನು ಈಗಾಗಲೇ ಪರಭಾರೆ ಮಾಡಿದ್ದಲ್ಲಿ ಅಥವಾ ಸರ್ಕಾರ ಉಪಯೋಗಿಸಿದ್ದಲ್ಲಿ, ಅದನ್ನು ಆಯಾ ದೇವಸ್ಥಾನಕ್ಕೆ ವಾಪಸ್​​ ಬಿಟ್ಟುಕೊಟ್ಟು ದೇವಸ್ಥಾನದ ಹೆಸರಿಗೆ ಪಹಣಿ ಮಾಡಿಸಬೇಕು ಎಂದು ಸಮಾವೇಶದಲ್ಲಿ ಹೇಳಲಾಯಿತು.


ಸಂತ ಸಮಾವೇಶದಲ್ಲಿ ಮತ್ತು ಬಳಿಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಸಂದರ್ಭದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಸೇರಿದಂತೆ ಹಲವು ಹಿಂದೂ ಪರ ಮುಖಂಡರು, ಸಾಧು ಸಂತರು ಉಪಸ್ಥಿತರಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget