ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

 ಗೆಳೆಯರ ಬಳಗ ದೇರಾಜೆ ವತಿಯಿಂದ ಶ್ಲಾಘನೀಯ ಕಾರ್ಯ



ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗದ ರಸ್ತೆಯನ್ನು ಗೆಳೆಯರ ಬಳಗ ದೇರಾಜೆ ಐವರ್ನಾಡು ನೇತೃತ್ವದಲ್ಲಿ ಊರಿನ ಗ್ರಾಮಸ್ಥರ ಸಹಕಾರದಿಂದ ಕಾಂಕ್ರೀಟ್ ಮಾಡಿ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.

ತೀರಾ ಅಗತ್ಯವಿದ್ದು ಹದಗೆಟ್ಟಿದ್ದ ರಸ್ತೆಯನ್ನು ಸರಕಾರ, ಜನಪ್ರತಿನಿಧಿಗಳು ಕಡೆಗಣಿಸಿದಾಗ ದೇರಾಜೆ ಗೆಳೆಯರ ಬಳಗದ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ 23 ಮೀ ಉದ್ದ, 3.5 ಮೀ.ಅಗಲದ ರಸ್ತೆಯನ್ನು 88 ಸಾವಿರ ವೆಚ್ಚದಲ್ಲಿ ಮಾಡಲಾಯಿತು.

 ರಸ್ತೆ ಉದ್ಘಾಟನೆಯನ್ನು ದೇವಸ್ಥಾನದ ಅರ್ಚಕರಾದ ರಾಮಚಂದ್ರ ಭಟ್ ನೆರೆವೇರಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಖಂಡಿಗೆಮೂಲೆ , ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ,ದಾಸಪ್ಪಗೌಡ ಕೊಡ್ತೀಲು ನವೀನ್ ಚಾತುಬಾಯಿ, ದೇವಿದಾಸ ಕತ್ಲಡ್ಕ ,ಜನಾರ್ದನ ಕೊಪ್ಪಳ,ವಸಿಷ್ಠ ಭಟ್, ಚಂದ್ರ ಕೋಲ್ಚಾರ್, ಪದ್ಮಾ ಕೋಲ್ಚಾರ್, ಗಣೇಶ್ ,ನಿಖಿಲ್ ಜಗದೀಶ ಕೋಲ್ಚಾರು ಗೆಳೆಯರ ಬಳಗ ದೇರಾಜೆಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗೆಳೆಯರ ಬಳಗ ದೇರಾಜೆ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆಯ ವಿಡಿಯೋ 👇🏻👇🏻

https://youtu.be/pSaCM-oV21o?si=NOPPicdTe0WrR3y8













Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget