ಉಡುಪಿ: ಕೇರಳ ಮೂಲದ ವ್ಯಕ್ತಿ ಲಾಕಪ್ ಡೆತ್; ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

 


ಉಡುಪಿ: ಮಹಿಳೆ ಮತ್ತು ಆಕೆಯ ಮಕ್ಕಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಒಂದು ದಿನದ ಹಿಂದೆ ಬಂಧಿಸಲ್ಪಟ್ಟ 45 ವರ್ಷದ ಕಾರ್ಮಿಕನೊಬ್ಬ ಭಾನುವಾರ ಬ್ರಹ್ಮಾವರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಬಿಜು ಮೋಹನ್ ಕೇರಳದ ಕೊಲ್ಲಂನಿಂದ ವಲಸೆ ಬಂದಿದ್ದ.

ಚೇರ್ಕಾಡಿ ಗ್ರಾಮದಿಂದ ಶನಿವಾರ ರಾತ್ರಿ 7.45ಕ್ಕೆ ಬ್ರಹ್ಮಾವರ ಪೊಲೀಸರಿಗೆ ಕರೆ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆ ಮತ್ತು ಆಕೆಯ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಲಾಗಿತ್ತು ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಸಹೋದರನೊಂದಿಗೆ ಬಂದು ದೂರು ದಾಖಲಿಸಿದ್ದು, ವ್ಯಕ್ತಿ ತನ್ನ ಮನೆಗೆ ನುಗ್ಗಿ ತನಗೆ ಮತ್ತು ತನ್ನ ಮಕ್ಕಳಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಮುಂಜಾನೆ 3.45 ಕ್ಕೆ ಬಿಜು ಚಲನರಹಿತನಾಗಿ ಕುಳಿತಿರುವುದನ್ನು ಗಾರ್ಡ್ ಗಮನಿಸಿದ್ದಾನೆ, ಅವನ ತಲೆಯು ಗೋಡೆಗೆ ತಾಗಿಕೊಂಡಿತು. ಕೂಡಲೇ ಅವರನ್ನು ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿಸಿದರು.

ಬಿಜು ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಇದು ಲಾಕಪ್ ಡೆತ್ ಪ್ರಕರಣವಾಗಿರುವುದರಿಂದ ಕಾನೂನು ಪ್ರಕಾರ ಸಿಐಡಿ ತನಿಖೆ ನಡೆಸಲಿದೆ. ಎರಡು ವೈದ್ಯಕೀಯ ತಂಡಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಮತ್ತು ವೀಡಿಯೊ ರೆಕಾರ್ಡ್ ಮಾಡಲಾಗುವುದು ಮತ್ತು ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆ ಮಾಡುತ್ತಾರೆ. ಎಲ್ಲಾ ವಿಧಾನಗಳನ್ನು ನಿಯಮಾನುಸಾರ ಅನುಸರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget