ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀಶ್ರೀ ಡಾ:ಧರ್ಮಪಾಲನಾಥ ಸ್ವಾಮೀಜಿ,ಗಣ್ಯರ ಭಾಗಿ
ಒಕ್ಕಲಿಗ ಗೌಡ ಸಮಾಜದ ಸೇವಾ ಚಟುವಟಿಕೆ ಹಿನ್ನೆಲೆಯಲ್ಲಿ ಒಕ್ಕಲಿಗ ಗೌಡ ಸೇವಾ ವಾಹಿನಿ (ರಿ) ದ.ಕ. ಅಸ್ಥಿತ್ವಕ್ಕೆ ಬಂದಿದ್ದು ಇದರ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಡಾ: ಧರ್ಮಪಾಲನಾಥ ಸ್ವಾಮೀಜಿ ಪಾಂಬಾರು ತೀರ್ಥರಾಮ ಗೌಡರ ಮನೆಯಲ್ಲಿ ಲೋಕಾರ್ಪಣೆ ಮಾಡಿದರು. ಈ ವೇಳೆ ಗುಡ್ಡೆ ಕುಸಿತದಿಂದ ಮನೆಗೆ ತೊಂದರೆಗೊಳಗಾಗಿದ್ದ ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮಗೌಡ ಪಾಂಬಾರು ಇವರ ಮನೆ ನಿರ್ಮಾಣಕ್ಕೆ ಒಕ್ಕಲಿಗ ಸೇವಾ ವಾಹಿನಿ ವತಿಯಿಂದ 2500 ಕೆಂಪು ಕಲ್ಲುಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಡಾ:ಧರ್ಮಪಾಲನಾಥ ಸ್ವಾಮೀಜಿ ಒಕ್ಕಲಿಗ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಒಳ್ಳೆಯ ವಿಚಾರವಾಗಿದ್ದು ಕಟ್ಟ ಕಡೆಯ ವ್ಯಕ್ತಿಗೆ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ.. ರಾಜಕೀಯ ರಹಿತವಾಗಿ ಈ ಒಂದು ಸಂಘಟನೆಯನ್ನು ಮುಂದುವರಿಸಿದ್ದಲ್ಲಿ.. ಸಮಾಜಕ್ಕೆ ದೊಡ್ಡ ಆಸ್ತಿಯಾಗಬಹುದು. ಎಂದರು.
ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡತ್ತಾರು ಮಾತನಾಡಿ ಇಂತಹ ಒಂದು ಪರಿಕಲ್ಪನೆ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿರುವುದು ನಮಗೆಲ್ಲ ಆದರ್ಶಪ್ರಾಯವಾದುದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯರಾದ ಶ್ರೀ ಬೋಜಪ್ಪಗೌಡ ಮಾಡತ್ತಾರು ಮತ್ತು ಶ್ರೀ ಕಿಶೋರ್ ಪುಣಚ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಲಾನುಭವಿ ತೀರ್ಥರಾಮರಿಗೇ ತೆಂಗಿನಗಿಡ ನೀಡುವ ಮೂಲಕ ವಿಧ್ಯುಕ್ತವಾಗಿ ಈ ಒಂದು ಕಾರ್ಯಕ್ರಮ ನೇರವೇರಿಸಲಾಯಿತು.
ನೆರೆದ ಊರವರಿಂದ ನಾಣ್ಯ ಸಂಗ್ರಹಿಸಿ ಸೇವಾವಾಹಿನಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಶ್ರೀ ಡಾ:ಧರ್ಮಪಾಲನಾಥ ಸ್ವಾಮೀಜಿ ಯವರ ಮಾತು 👇🏻👇🏻
Post a Comment