ನ. 21 ರಿಂದ ನ. 23ರವರೆಗೆ ಭಟ್ಕಳ ತಾಲೂಕಿನ ಬೆಂಗ್ರೆಯ ಆರ್ ಎನ್.ಎಸ್ ಗಾಲ್ಫ್ ಕ್ಲಬ್ ಮೈದಾನದಲ್ಲಿ ರಾಜ್ಯ ಮಟ್ಟದ ಮತ್ಸ್ತ ಮೇಳ ನಡೆಯುತ್ತಿದೆ.
ಭಟ್ಕಳ ತಾಲೂಕಿನಲ್ಲಿ ಮರಳಿನ ಅಭಾವದಿಂದಾಗಿ ಸಾವಿರಾರು ಕಾರ್ಮಿಕರು, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿರುವ ನೂರಾರು ವ್ಯಾಪಾರ ವಹಿವಾಟುಗಳು ತೊಂದರೆಗೆ ಸಿಕ್ಕಿರುವ ಈ ಸಂದರ್ಭದಲ್ಲಿ ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡಿ ಈ ರೀತಿಯ ಮತ್ಸ್ಯ ಮೇಳವನ್ನು ನಡೆಸುತ್ತಿರುವುದು ಸರ್ಕಾರದ ಜನ ವಿರೋದಿ ನೀತಿಗೆ ಸ್ಪಷ್ಟ ಉದಾಹರಣೆ ಆಗಿದೆ. ಜನರು ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಜನರ ಕಷ್ಟಗಳಿಗೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ವಿನಿಯೋಗಿಸದೆ ಇಷ್ಟು ವರ್ಷ ಸರಳವಾಗಿ ನಡೆಸುತ್ತಿದ್ದ ಈ ಕಾರ್ಯಕ್ರಮವನ್ನು ಮಾನ್ಯ ಮೀನುಗಾರಿಕಾ ಸಚಿವರು ತಮ್ಮ ಪ್ರತಿಷ್ಟೆ ಮೆರೆಸಲು ಸರ್ಕಾರದ ಕೊಟ್ಯಂತರ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಮೀನುಗಾರಿಕೆ ನಡೆಸುವವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಮೀನುಗಾರರ ಬಗ್ಗೆ ಸಚಿವರಿಗೆ ನಿಜವಾದ ಕಾಳಜಿ ಇದ್ದರೆ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸಬ್ಸಿಡಿ ಇತ್ಯಾದಿಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಹೆಚ್ಚಿಸುವಂತ ಕೆಲಸ ಮಾಡಲಿ. ಇದೇ ಮತ್ಸ್ಯ ಮೇಳಕ್ಕೆ ವೆಚ್ಚ ಮಾಡುವ ಹಣದಲ್ಲಿ ಸಾವಿರಾರು ಬಡ ಮೀನುಗಾರರ ಸಾಲ ಮನ್ನಾ ಮಾಡಬಹುದು. ಒಂದು ಕಡೆ ಸರ್ಕಾರ ಬಡವರ ಬಿಪಿಎಲ್ ಕಾರ್ಡ ರದ್ದು ಪಡಿಸುತ್ತಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ತಾಲೂಕಿನ ಯಾವುದೇ ಕಛೇರಿಗಳಲ್ಲಿಯು ಜನಸಾಮಾನ್ಯರು ಕೆಲಸ ಮಾಡಿಸಿಕೊಳ್ಳುವುದೇ ದುಸ್ತರವಾಗಿದೆ. ಮಾನ್ಯ ಉಸ್ತುವಾರಿ ಸಚಿವರು ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡದೇ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚಿನ ಗಮನ ನೀಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಭಟ್ಕಳ ಮಂಡಲದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯ್ಕ ಮತ್ತು ಮಾಜಿ ಅಧ್ಯಕ್ಷರಾದ ರಾಜೇಶ ನಾಯ್ಕ ಪತ್ರಿಕಾ ಹೇಳಿಕೆಯನ್ನು ಇಂದು ನೀಡಿದರು.
Post a Comment