ವಕೀಲ ಕೆ.ಆರ್ ವಿದ್ಯಾಧರ್ ರನ್ನು 6 ತಿಂಗಳು ಅಮಾನತು ಮಾಡಿದ ಮಡಿಕೇರಿ ವಕೀಲರ ಸಂಘ
ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಇಬ್ಬರು ಅಪ್ರತಿಮ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯರವರ ಬಗ್ಗೆ ಅವಹೇಳನಕಾರಿ ಸಂದೇಶವನ್ನು ರವಾನಿಸಿದ ಬಗ್ಗೆ ವಕೀಲರಾದ ಕೆ.ಆರ್.ವಿಧ್ಯಾದರ್‌ರವರ ನಡತೆಯನ್ನು ನ.25 ರಂದು ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ್‌ರವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಸರ್ವಾನುಮತದಿಂದ ತೀವ್ರವಾಗಿ ಖಂಡಿಸಲಾಯಿತು.
ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಕೊಡಗು ಜಿಲ್ಲೆಯಲ್ಲಿ ಇಂತಹ ಹೇಳಿಕೆಗಳು/ಸಂದೇಶಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ ಎಂದು ಪರಿಗಣಿಸಿ ಕೆ.ಆರ್. ವಿಧ್ಯಾದರ್‌ರವರ ನಡತೆಯನ್ನು ಖಂಡಿಸಿ ಅವರನ್ನು ವಕೀಲರ ಸಂಘದಿಂದ 6 ತಿಂಗಳ ವರೆಗೆ ಅಮಾನತು ಮಾಡುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
Post a Comment