ಅಲಪ್ಪುಳ(ಕೇರಳ) : ಮೊಲ ಕಚ್ಚಿದ ಪರಿಣಾಮ ಗೃಹಿಣಿಯೋರ್ವಳು ಸಾವನ್ನಪ್ಪಿದ ಘಟನೆ ಕೇರಳದ ಅಲಪ್ಪುಳ ತಕಾಝೀಯಲ್ಲಿ ನಡೆದಿದೆ. ಶಾಂತಮ್ಮ (65) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.
ಮನೆಯ ಸಾಕು ಮೊಲ ಸಾಂತಮ್ಮ ಅವರನ್ನು ಕಚ್ಚಿದೆ ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಶಾಂತಮ್ಮ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೇಬಿಸ್ ವಿರೋಧಿ ಲಸಿಕೆ ತೆಗೆದುಕೊಂಡಿದ್ದರು. ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡ ನಂತರ ಶಾಂತಮ್ಮ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆದಾಗಲೇ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು, ಬಳಿಕ ಬಿಡುಗಡೆಯಾಗಿ ಮನೆಗೆ ಬಂದ ಶಾಂತಮ್ಮ ಮೃತಪಟ್ಟಿದ್ದಾಳೆ. ಈ ಸಂಬಂಧ ಆಕೆಯ ಮಗಳು ಸೋನಿ ಅಂಬಲಪುಳ ಪೊಲೀಸರು ಮತ್ತು ಆಸ್ಪತ್ರೆಯ ಅಧೀಕ್ಷಕರಿಗೆ ದೂರು ನೀಡಿದ್ದಾರೆ
Post a Comment