ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿತ್ತು. ಅದಾದ ಬಳಿಕ ಹಣವೇ ಬಂದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದವರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜೂನ್ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ್ದ ರಾಜ್ಯ ಸರ್ಕಾರ ಬಳಿಕ ಎರಡು ತಿಂಗಳು ಸೈಲೆಂಟ್ ಆಗಿತ್ತು.
ಈ ನಡುವೆ ಜನರು ಗೃಹಲಕ್ಷ್ಮಿಯೆಲ್ಲಾ ಬೋಗಸ್ ಎಂದು ಹಿಡಿಶಾಪ ಹಾಕಲು ಆರಂಭಿಸಿದ್ದರು. ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಬರುತ್ತೆ ಆಗ ಬರುತ್ತೆ ಎಂದು ಹೇಳಿಕೆ ನೀಡಿದ್ದರೂ ಹಣ ಮಾತ್ರ ಬಂದಿರಲಿಲ್ಲ.
ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಎಂದೆಲ್ಲಾ ಸರ್ಕಾರ ಕಾರಣ ಕೊಡುತ್ತಲೇ ಇತ್ತು. ಕೊನೆಗೂ ಅಕ್ಟೋಬರ್ ನಲ್ಲಿ ಎರಡು ಕಂತು ಬಿಡುಗಡೆಯಾಗಿತ್ತು. ಇದೀಗ ಅಕ್ಟೋಬರ್ ಕಂತಿನ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತದೆ ಎಂದು ಫಲಾನುಭವಿ ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.
ಅವರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಗೃಹಲಕ್ಷ್ಮಿ ಮತ್ತೊಂದು ಕಂತು ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಇದಕ್ಕೆ ಮೊದಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಳೆದ ತಿಂಗಳಿನ ಕಂತು ಈ ತಿಂಗಳು ಬಿಡುಗಡೆಯಾಗಲಿದೆ. ಅದೇ ರೀತಿ ಪ್ರತೀ ತಿಂಗಳು ನಡೆಯುವುದಾಗಿ ಹೇಳಿದ್ದರು.
Post a Comment