ಎಸ್.ಅಂಗಾರರು ಸಚಿವರಾಗಿದ್ದ 2022-23ನೇ ಸಾಲಿನಲ್ಲಿ ಸುರಿದ ಬಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗಾಗಿ ಮಳೆ ಪರಿಹಾರ ಕಾರ್ಯಕ್ರಮದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದ 3 ಕೋಟಿ ರೂ.ಗಳ ಕಾಮಗಾರಿಗಳ ಪಟ್ಟಿಗೆ ಆಗಿನ ಸರಕಾರ ಮಂಜೂರಾತಿ ನೀಡಿತ್ತು. ಆ ಪಟ್ಟಿಯಲ್ಲಿದ್ದ. ಈ ಕೆಳಗೆ ಉಲ್ಲೇಖಿಸಲಾದ ರಸ್ತೆಗಳ ಅಭಿವೃದ್ಧಿಗೆ ಈಗಿನ ಸರಕಾರ ಅನುದಾನ ಬಿಡುಗಡೆಗೊಳಿಸಿ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕಲ್ಲೋಣಿ-ಕುಳ್ಳಂಪಾಡಿ ರಸ್ತೆ ಅಭಿವೃದ್ಧಿಗೆ ರೂ. 25.00 ಲಕ್ಷ, ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಐವರ್ನಾಡು-ದೇರಾಜೆ ರಸ್ತೆ ಅಭಿವೃದ್ಧಿಗೆ ರೂ. 25 ಲಕ್ಷ,
ಸುಳ್ಯ ತಾಲೂಕು ಕೊಡಿಯಾಲಬೈಲು-ಕಮಿಲ ರಸ್ತೆ ಅಭಿವೃದ್ಧಿಗೆ ರೂ. 25 ಲಕ್ಷ, ಕಡಬ ತಾಲೂಕು ಕಾಯಿಮಣ ಗ್ರಾಮದ ಕೆಲೆಂಬೀರಿ-ತುಂಬ ರಸ್ತೆ ಅಭಿವೃದ್ಧಿಗೆ ರೂ. 20 ಲಕ್ಷ, ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ಕೆ-ಶರವೂರು ರಸ್ತೆ ಅಭಿವೃದ್ಧಿಗೆ ರೂ.29.85 ಲಕ್ಷ, ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಹೊಸೊಳಿಕೆ ರಸ್ತೆ ರೂ. 20 ಲಕ್ಷ ರೂ ಮಂಜೂರುಗೊಂಡಿರುವುದಾಗಿ ತಿಳಿದುಬಂದಿದೆ.
ಎಸ್.ಅಂಗಾರರು ಸುಮಾರು 3 ಕೋಟಿ ಅನುದಾನಕ್ಕಾಗಿ ಈ ಮೇಲಿನ ರಸ್ತೆಗಳ ಜತೆಗೆ ಇನ್ನೂ ಕೆಲವು ರಸ್ತೆಗಳ ಹೆಸರು ಪಟ್ಟಿಯಲ್ಲಿತ್ತು. ಇದೀಗ ರೂ.1. ಕೋಟಿ 44 ಲಕ್ಷದ 85 ಸಾವಿರ ಬಿಡುಗಡೆಗೊಂಡಿದೆ.
ಅಂಗಾರರು ಕೊಟ್ಟ ಪಟ್ಟಿಯಲ್ಲಿದ್ದ ಕೆಲವು ರಸ್ತೆಗಳನ್ನು ಈಗಿನ ಶಾಸಕರು ಬದಲಾಯಿಸಿದ್ದು ಅದು ಸರಕಾರದ ಹಂತದಲ್ಲಿದೆ ಎಂದು ತಿಳಿದುಬಂದಿದೆ.
Post a Comment