ಪ್ರೊ ಕಬಡ್ಡಿ ಲೀಗ್‌: ದಬಾಂಗ್‌ಗೆ ಮಣಿದ ವಾರಿಯರ್ಸ್‌


 ಹೈದರಾಬಾದ್‌: ಆರಂಭಿಕ ಮುನ್ನಡೆಯನ್ನು ಕೊನೆಯವೆರೆಗೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಗುರುವಾರ ಮೂರು ಅಂಕಗಳಿಂದ ಮಣಿಸಿತು. ಆ ಮೂಲಕ ಸತತ ನಾಲ್ಕು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿತು. 

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 33-30 ಅಂಕಗಳಿಂದ ಬೆಂಗಾಲ್‌ಗೆ ಸೋಲುಣಿಸಿತು. ಕೊನೆಯ ಐದು ನಿಮಿಷಗಳಲ್ಲಿ ಬೆಂಗಾಲ್‌ ಆಟಗಾರರು ಆಕ್ರಮಣಕಾರಿ ಆಟವಾಡಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ತಂಡ ಮೂರನೇ ಸೋಲಿಗೆ ಗುರಿಯಾಗಬೇಕಾಯಿತು.



ದಬಾಂಗ್‌ ಡೆಲ್ಲಿ ಪರ ಅನುಭವಿ ಅಶು ಮಲಿಕ್‌ (10 ಅಂಕ), ವಿನಯ್‌ (8 ಅಂಕ) ಮತ್ತು ಆಶೀಶ್‌ (6 ಅಂಕ) ಮಿಂಚಿದರು. ಬೆಂಗಾಲ್‌ ವಾರಿಯರ್ಸ್‌ ಕಡೆ ನಿತಿನ್‌ ಕುಮಾರ್‌ (15 ಅಂಕ) ಏಕಾಂಗಿ ಹೋರಾಟ ನಡೆಸಿದರು. ಸ್ಟಾರ್‌ ರೇಡರ್‌ ಮಣಿಂದರ್‌ ಸಿಂಗ್‌, ಸುಶೀಲ್‌ ಕಾಂಬ್ರೋಜ್‌ ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲವಾಗಿದ್ದು, ತಂಡಕ್ಕೆ ಹಿನ್ನಡೆ ಉಂಟುಮಾಡಿತು.




ಮುಕ್ತಾಯಕ್ಕೆ ಐದು ನಿಮಿಷಗಳಿರುವಾಗ 30-25ರಲ್ಲಿ ಮುನ್ನಡೆಯಲ್ಲಿದ್ದ ಡೆಲ್ಲಿ ಗೆಲುವು ಸುಲಭವಾಗುವಂತೆ ಕಂಡಿತು. ಆದರೆ ಬೆಂಗಾಲ್‌ ಆಟಗಾರರು ಮರುಹೋರಾಟ ಸಂಘಟಿಸಿ ಹಿನ್ನಡೆಯನ್ನು ಕಡಿಮೆ ಮಾಡುತ್ತ ಹೋದರು. ನಿತಿನ್‌ ಕುಮಾರ್‌ ಸೂಪರ್‌ ಟೆನ್‌ ಸಾಹಸ ಮಾಡಿದರೂ ತಂಡದ ಹಿನ್ನಡೆ ಅಂತಿಮವಾಗಿ ಮೂರು ಅಂಕಕ್ಕೆ ಇಳಿಯಿತು.

ದಿನದ ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 35-22ರಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿತು.







Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget