ನಕ್ಸಲ್ ವಿಕ್ರಂ ಗೌಡ ಕೊಲೆ ನಕಲಿ ಎನ್ಕೌಂಟರ್; ನ್ಯಾಯಾಂಗ ತನಿಖೆಗೆ ನಕ್ಸಲ್ ಚಳವಳಿಯಿಂದ ಹೊರಬಂದವರ ಆಗ್ರಹ

 ನಕ್ಸಲ್ ವಿಕ್ರಂ ಗೌಡ ಅವರದ್ದು ನಕಲಿ ಎನ್​ಕೌಂಟರ್ ಆಗಿದ್ದು, ಇದನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಎಡಪಂಥೀಯ ಮುಖಂಡರಾದ ನೂರ್​ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್​​ ಆಗ್ರಹಿಸಿದರು.



ಬೆಂಗಳೂರ: ಇತ್ತೀಚೆಗೆ ನಕ್ಸಲ್ ಚಳವಳಿಯಲ್ಲಿ ಭಾಗಿಯಾದ ವಿಕ್ರಂ ಗೌಡ ಅವರನ್ನು ಕೊಂದಿರುವುದು ನಕಲಿ ಎನ್​ಕೌಂಟರ್ ಆಗಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ನಕ್ಸಲ್ ಚಳವಳಿಯಿಂದ ಹೊರ ಬಂಧಿರವ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಆಗ್ರಹಿಸಿದರು.


ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕ್ರಂ ಗೌಡ ಹತ್ಯೆ ಮಾಡಿರುವುದರಿಂದ ಹಲವು ಸಂಶಯಗಳಿವೆ. ಈ ಕೃತ್ಯದ ಹಿಂದೆ ಪೊಲೀಸ್ ಇಲಾಖೆ ಕೈವಾಡ ಇರುವ ಸಂಶಯ ಇದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸದಿದ್ದಲ್ಲಿ ಮೃತರಾದ ವಿಕ್ರಂ ಗೌಡ ಹತ್ಯೆಯಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರುವ ಸಂಶಯಕ್ಕೆ ಕಾರಣವಾಗಲಿದೆ ಎಂದರು.

ಮಲೆಕುಡಿಯ ಆದಿವಾಸಿ ಕುಟುಂಬಕ್ಕೆ ಸೇರಿದ ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡರ ಹತ್ಯೆಯಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮಲೆನಾಡಿನಲ್ಲಿ ಪೊಲೀಸರ ಓಡಾಟ–ಆರ್ಭಟ ಮತ್ತೆ ಹೆಚ್ಚಾಗಿದ್ದು, ಜನಸಾಮಾನ್ಯರ ಮನದಲ್ಲಿ ಆತಂಕದ ಮೋಡಗಳು ಕವಿಯುವಂತಾಗಿದೆ. ಕಗ್ಗತ್ತಲ ರಾತ್ರಿಯಲ್ಲಿ, ಕಾಡಿನ ಒಡಲಲ್ಲಿ ಚಿಮ್ಮಿದ ಆದಿವಾಸಿ ಯುವಕನ ನೆತ್ತರ ಹನಿಗಳು ಗೃಹಮಂತ್ರಿ ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಳಿಯಂಗಿಗಳ ಮೇಲೂ ಬಿದ್ದಂತಿದೆ. ಹೀಗಾಗಿ ಸತ್ಯಾಂಶ ಹೊರಬರಬೇಕಾಗಿದ್ದು‌ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.


ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಶಾಂತವಾಗಿದ್ದು, ಇದೀಗ ಕರಾವಳಿಯಲ್ಲಿ ಗುಂಡಿನ ಸದ್ದು ಆರ್ಭಟಿಸಿದೆ. ವಿಕ್ರಂ ಗೌಡ ಮತ್ತು ತಂಡ ಪೊಲೀಸರ ಮೇಲೇನೂ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಕನಿಷ್ಟ ಬೆದರಿಸಿಯೂ ಇರಲಿಲ್ಲ, ಏನನ್ನೂ ಸುಟ್ಟಿರಲೂ ಇಲ್ಲ. ಹಾಗಿದ್ದಾಗ ಕೊಲ್ಲುವ ಅಗತ್ಯವಾದರೂ, ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದಕೂ ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಲು ಲೈಸೆನ್ಸನ್ನು ನಿಮಗೆ ಕೊಟ್ಟವರು ಯಾರು? ಎಂದು ಪೊಲೀಸ್​ ಇಲಾಖೆಯನ್ನು ಅವರು ಪ್ರಶ್ನಿಸಿದದರು.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ನಿವೃತ್ತ ನ್ಯಾಯಾಧೀಶರೊಬ್ಬರ ಮೇಲುಸ್ತುವಾರಿಯಲ್ಲಿ, ತಕ್ಷಣ ಘಟನೆಯ ಕುರಿತು ಕೂಲಂಕೂಷ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.


ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಲು ನಕ್ಸಲರಿಗೆ ಕಿವಿಮಾತು: ರಾಜ್ಯದ ಪ್ರಜ್ಞಾವಂತ ನಾಗರೀಕರ ಕರೆಗೆ ಓಗೊಟ್ಟು ಹಲವರು 2014-2018ರ ನಡುವೆ ಕಾಡಿನಿಂದ ಹೊರ ಬಂದು ಮುಖ್ಯವಾಹಿನಿಗೆ ಸೇರಿಕೊಂಡರು. ಮುಖ್ಯವಾಹಿನಿಗೆ ಬಂದವರನ್ನು ಘನತೆಯಿಂದ ನಡೆಸಿಕೊಂಡಿಲ್ಲ ಎಂಬ ವಾಸ್ತವವೂ ನಮ್ಮ ಕಣ್ಣ ಮುಂದಿದೆ. ಆದರೂ ಇದಕ್ಕಿಂತ ಮಿಗಿಲಾದ ಸಾಮಾಜಿಕ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ನಿಮ್ಮುಗಳ ಮೇಲೂ ಇದೆ. ಎಲ್ಲರೂ ಸೇರಿ ರಾಜ್ಯದಲ್ಲಿ ಪ್ರಬಲವಾದ ಜನಾಂದೋಲನ ಕಟ್ಟಬೇಕಾಗಿದೆ. ಈ ನಾಡು, ಈ ದೇಶ ನಿಜವಾದ ಅರ್ಥದಲ್ಲಿ ಜನತೆಯದಾಗುವ ತನಕ ಒಡಗೂಡಿ ಅಷ್ಟೇ ಬದ್ಧತೆಯ ಜೊತೆ ಹೋರಾಡಬೇಕು. ದಯವಿಟ್ಟು ನಮ್ಮ ಈ ಮನವಿಯನ್ನು ಸಮಸ್ತ ಜನಪರ ಚಳವಳಿಗಳ ಮನವಿ ಎಂದು ಭಾವಿಸಿ. ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಮಾಡಿದರೆ ರಾಜ್ಯದ ನಾಗರೀಕ ಸಮಾಜ ನಮ್ಮ ಜೊತೆ ನಿಂತಂತೆ ನಿಮ್ಮ ಜೊತೆಯೂ ನಿಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಇದು ಸಕಾಲ. ದಯವಿಟ್ಟು ಮರು ಆಲೋಚನೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಎಂದು ಮನವಿ ಮಾಡಿದರು.

ಸರ್ಕಾರದ ಹಲವು ನೀತಿಗಳಿಂದ ಅನೇಕ ಜನ ಆದಿವಾಸಿ ಯುವಕರು ನಕ್ಸಲ್‌ ಚಳವಳಿಗೆ ಆಕರ್ಶಿತರಾಗಿ ಸಶಸ್ತ್ರ ದಳ ಸೇರುವಂತಹ ಪರಿಸ್ಥಿತಿಯಿದೆ. ಇದಕ್ಕೆ ಕಾರಣ ಕಾಡಿನ ಜೊತೆ ಬದುಕುತ್ತಿದ್ದವರನ್ನು ಕಾಡಿನಿಂದ ಪ್ರತ್ಯೇಕಿಸಲು ಮುಂದಾಗಿರುವುದಾಗಿದೆ. ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಸತತ ಬೆದರಿಕೆಗಳು, ಧಮಕಿಗಳು. ಹತಾಶರಾದ, ರೊಚ್ಚಿಗೆದ್ದ ಹಲವು ಯುವಕರು ನಕ್ಸಲ್‌ ದಳಗಳಿಗೆ ಸೇರಲು ಸರ್ಕಾರವೇ ಕಾರಣವಾಗಿದೆ ಎಂದು ಅವರು ಹೇಳಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget