ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದಿಂದ , ಅಂತಿಮ ವಾಣಿಜ್ಯ ಪದವಿ ಮತ್ತು ಉದ್ಯಮ ಆಡಳಿತ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಅಂತರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೇರಣ ಎಂಬ ಪೆಸ್ಟ್ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ ದಿನೇಶ್ ಪಿ ಟಿ ವಹಿಸಿದರು. ಕಾರ್ಯಕ್ರಮವನ್ನು ಚರಿತ್ರೆ ಯೂಟ್ಯೂಬ್ ಚಾನೆಲ್ ನಲ್ಲಿ ಧ್ವನಿ ನೀಡುವ ನಿತಿನ್ ಪೂಜಾರಿಯವರು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವ ಇರಬೇಕು, ನಿರಂತರ ಪರಿಶ್ರಮದಿಂದ ಕಲಿತಾಗ ಯಶಸ್ಸು ಸಾಧ್ಯ ಎಂದು ಮಾತನಾಡಿದರು. ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಮುಖ್ಯಸ್ಥೆ ಲತಾ ಬಿ ಟಿ , ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಪಿ ಎಸ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಕೌಶಿಕ್ ಕೆ ವಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕ ಡಾ. ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಹೃತಿಕ್ ಸಿ.ವಿ ವಂದಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಸ್ ಆರ್ ಕೆ ಲ್ಯಾಡರ್ಸ್, ಪುತ್ತೂರಿನ ಮಾಲಕರಾದ ಕೇಶವ ಅಮೈ ಅವರು ಭಾಗವಹಿಸಿದ್ದರು. 10 ಸ್ಪರ್ಧೆಗಳನ್ನು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಒಟ್ಟು 22 ತಂಡಗಳು ಭಾಗವಹಿಸಿದ್ದವು. ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಸಮಗ್ರ ಪ್ರಥಮ ಸ್ಥಾನ ಹಾಗೂ ಕೆ ಎಸ್ ಗೌಡ ಪಿಯು ಕಾಲೇಜ್ ನಿಂತಿಕಲ್ಲು ಸಮಗ್ರ ದ್ವಿತೀಯ ಸ್ಥಾನವನ್ನು ಪಡೆಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕದ ಅದ್ವಿತೀಯ ಡಾನ್ಸ್ ಕಲಾವಿದ ಕೌಶಿಕ್ ಸುವರ್ಣ ಅವರಿಂದ ಡ್ಯಾನ್ಸ್ ದಮಾಕ ಕಾರ್ಯಕ್ರಮ ನಡೆಯಿತು. ತದನಂತರ ಕೊಳಲು ಮತ್ತು ಚಂಡೆ ವಾದನ ಕಾರ್ಯಕ್ರಮ ನಡೆಯಿತು. ಮಯೂರಿ ಕಾರ್ಯಕ್ರಮವನ್ನು ನಿರೂಪಿಸಿದರು.ನಿರೀಕ್ಷಾ ಸ್ವಾಗತಿಸಿ ಬಿಂದು ಭಾರ್ಗವಿ ವಂದಿಸಿದರು.
ಈ ಕಾರ್ಯಕ್ರಮದ ಸ್ವಾಗತವನ್ನು ವಿದ್ಯಾರ್ಥಿ ನಿರಕ್ಷಾ ಇವರ ನೆರವೇರಿಸಿ ಕುಮಾರಿ ಭಿಂದು ಭಾರ್ಗವಿ ಇವರು ವಂದಿಸಿದರು. ಅಂತಿಮ ವಾಣಿಜ್ಯ ಪದವಿ ವಿದ್ಯಾರ್ಥಿನಿ ಮಯೂರಿ ಇವರು ಕಾರ್ಯಕ್ರಮವನ್ನು ನೆರವೇರಿಸಿದರು.
Post a Comment