ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ವಕ್ಪ್ ಮಂಡಳಿಯು ನೋಟೀಸು ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು ನ.೪ರಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಏನೆಲ್ಲ ಅನಾಹುತಗಳು ಆಗುತ್ತಿದೆ ಎನ್ನುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆರಂಭದಲ್ಲಿ ದಲಿತರ ಹಣವನ್ನು ಈ ಸರಕಾರ ಲೂಟಿ ಹೊಡೆಯಿತು. ಆ ಬಳಿP ಎಸ್‌ಟಿ ನಿಗಮದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಬಳಕೆ ಮಾಡುವಂತ ದುಸ್ಥಿತಿ ಸರಕಾರ ಕ್ಕೆ ಬಂದಿದೆ. ಇದೀಗ ಮತ್ತೆ ಜನರಿಗೆ ದೊಡ್ಡ ಹೊಡೆತ ಸರಕಾರ ನೀಡುತ್ತಿದ್ದು ತಾವು ಕೃಷಿ ಮಾಡಿಕೊಂಡು ಬರುತ್ತಿರುವ ಜಮೀನನ್ನು ವಕ್ಪ್ ಆಸ್ತಿ ಎಂದು ನೋಟೀಸು ನೀಡುತ್ತಿದೆ. ಇದರ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಾದ ಅನಿರ್ವಾಯತೆ ಇದೆ. ಆದ್ದರಿಂದ ಈ ಕಾನೂನು ವಾಪಸ್ ಪಡೆಯುವ ತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಾವು ರಾಜ್ಯದ ರೈತರ ಪರ ನಿಲ್ಲುತ್ತೇವೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಆದರೆ ಇಂದು ಆ ಗ್ಯಾರಂಟಿ ಯೋಜನೆಗಳು ಜನರಿಗೆ ಸಿಗುತ್ತಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸರಕಾರ ಜನರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ನೋಟೀಸು ನೀಡುತ್ತಿದೆ. ಜನರನ್ನು ಬೀದಿಯಲ್ಲಿ ನಿಲ್ಲಿಸುವ ಕೆಲಸವನ್ನು ಈ ದುಷ್ಟ ಸರಕಾರ ಮಾಡುತ್ತಿದೆ. ಸರಕಾರದ ಈ ಷಡ್ಯಂತ್ರದ ವಿರುದ್ಧ ಬಿಜೆಪಿ ಹೋರಾಟ ಮಾಡಿ ಜನರ ಪರ ನಿಲ್ಲುತ್ತದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ರಾಜ್ಯದಲ್ಲಿ ಚುನಾಯಿತ ಸರಕಾರ ಅಧಿಕಾರದಲ್ಲಿದೆಯೋ ಅಥವಾ ವಕ್ಫ್ ಸರಕಾರ ಅಧಿಕಾರದಲ್ಲಿದೆಯೋ ಎಂಬ ಸಂಶಯ ನಮಗೆ ಮೂಡುತ್ತಿದೆ. ಇದೀಗ ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ವಕ್ಫ್ ಮಂಡಳಿ ನೋಟೀಸು ನೀಡಿರುವ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ನಮ್ಮ ಅಜ್ಜಾವರ ಗ್ರಾಮದ ಮೇನಾಲದಲ್ಲಿಯೂ ಕೂಡಾ ನಮ್ಮ ಕುಟುಂಬಕ್ಕೆ ಸೇರಿದ ಜಾಗ ಕಬಳಿಕೆಗೆ ವಕ್ಫ್ ನೊಟೀಸು ಆಗಿತ್ತು. ಆದರೆ ನಾವು ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ಆ ಜಮೀನು ಹಾಗೇ ಉಳಿದಿದೆ. ಈಗ ರೈತರು ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ನಾವೆಲ್ಲರೂ ಭುಮಿ ಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ವಕ್ಫ್ ಮಂಡಳಿ ನೋಟೀಸು ನೀಡುತ್ತಿರುವುದು ರೈತರ ಪಾಲಿಗೆ ಕರಾಳ ದಿನ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ. ಈ ದುಷ್ಟ ಸರಕಾರ ಹೋಗುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ. ಕುಸುಮಾಧರ ಸ್ವಾಗತಿಸಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ವಂದಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಮೂಲಕ ಬಿಜೆಪಿ ಪ್ರಮುಖರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷರುಗಳಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪ್ರಮುಖರಾದ ವಿಜಯ ಕುಮಾರ್ ಮುಳುಗಾಡು, ಶಶಿಕಲ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಬಾಲಕೃಷ್ಣ ರೈ ದುಗಲಡ್ಕ, ಬುದ್ಧ ನಾಯ್ಕ್, ಸುಧಾಕರ ಕುರುಂಜಿಭಾಗ್, ಪುಷ್ಪಾ ಮೇದಪ್ಪ, ಸರೋಜಿನಿ ಪೆಲತಡ್ಕ, ರಾಜೇಶ್ ಕಿರಿಭಾಗ, ಸೋಮನಾಥ ಪೂಜಾರಿ, ಜಿ.ಜಿ. ನಾಯಕ್, ವಿಕ್ರಂ ಅಡ್ಪಂಗಾಯ, ಸುನಿಲ್ ಕೇರ್ಪಳ, ವಿನಯ ಕುಮಾರ್ ಚಾರ್ಮತ,
ದಯಾನಂದ ಕೇರ್ಪಳ, ಕಿಟ್ಟಣ್ಣ ರೈ ಮೇನಾಲ, ಚಂದ್ರಶೇಖರ ಕೇರ್ಪಳ, ಮಹೇಶ್ ಮೇರ್ಕಜೆ, ಅವಿನಾಶ್ ಕುರುಂಜಿ, ಶಾಂತಾರಾಮ ಕಣಿಲೆಗುಂಡಿ, ಗುಣವತಿ ಕೊಲ್ಲಂತಡ್ಕ, ಚಂದ್ರಶೇಖರ ರಾವ್ ಕೇರ್ಪಳ, ಶೀನಪ್ಪ ಬಯಂಬು, ರಮೇಶ್ ಇರಂತಮಜಲು, ಕಿರಣ ಕುರುಂಜಿ,ಭಾರತಿ ಉಳುವಾರು, ಶಂಕರ ಪೆರಾಜೆ, ನಯನ ರೈ ಮೇನಾಲ, ರಮೇಶ್ ಇರಂತಮಜಲು, ಹರೀಶ್ ಬೂಡುಪನ್ನೆ, ರಾಮಕೃಷ್ಣ ರೈ ಪೇರಾಲುಗುತ್ತು, ಸೀತಾನಂದ ಬೇರ್ಪಡ್ಕ, ನಿಖೇಶ್ ಉಬರಡ್ಕ, ಗುರುಸ್ವಾಮಿ ಬೀರಮಂಗಲ, ನಾರಾಯಣ ಎಂ.ಎಸ್.,
ಅಶೋಕ್ ಅಡ್ಕಾರು, ಶಿವಾನಂದ ಕುಕ್ಕುಂಬಳ, ಜಯಪ್ರಕಾಶ್ ಕುಂಚಡ್ಕ, ಶ್ರೀನಾಥ ರೈ ಬಾಳಿಲ, ಮೋಹನ ಕೇರ್ಪಳ, ಜಿನ್ನಪ್ಪ ಪೂಜಾರಿ, ಶಿವರಾಮ ಕೇರ್ಪಳ, ಜಗನ್ನಾಥ ಜಯನಗರ, ಭಗೀರಥ ಕೋಲ್ಚಾರು, ಕಿಶನ್ ಜಬಳೆ, ಲೋಕೇಶ್ ಕೆರೆಮೂಲೆ, ಮಹೇಶ್ ಮೇನಾಲ, ಕೇಶವ ಸಿ.ಎ., ಶ್ರೀನಿವಾಸ ರಾವ್ ಹಳೆಗೇಟು, ಶ್ಯಾಮ್ ಪಾನತ್ತಿಲ, ವಾಸುದೇವ ಪುತ್ತಿಲ, ಪ್ರಭೋದ್ ಶೆಟ್ಟಿ ಮೇನಾಲ, ಮುರುಳೀಧರ ಮೇನಾಲ, ಚಂದ್ರಜಿತ್ ಮಾವಂಜಿ, ರಾಜೇಶ್ ಶೆಟ್ಟಿ ಮೇನಾಲ, ದೇವರಾಜ್ ಕುದ್ಪಾಜೆ, ಶಿವನಾಥ್ ರಾವ್ ಹಳೆಗೇಟು, ಗಂಗಾಧರ ಮಾವಂಜಿ, ಗೋವಿಂದ ಅಳವುಪಾರೆ, ಕಕೃಷ್ಣಯ್ಯ ಮೂಲೆತೋಟ, ಜಯರಾಜ್ ಕುಕ್ಕೆಟ್ಟಿ, ರಾಕೇಶ್ ಮೆಟ್ಟಿನಡ್ಕ, ನವೀನ್ ಎಲಿಮಲೆ, ಸೋಮಶೇಖರ ಪೈಕ, ಜ್ಞಾನಾನಂದ ಚಿಮ್ಟಿಕಲ್ಲು, ರಂಜಿತ್ ಎನ್.ಆರ್., ಸುರೇಶ್ ಕಣೆಮರಡ್ಕ, ಉಪೇಂದ್ರ ನಾಯ್ಕ್, ಐತ್ತಪ್ಪ ನಾಯ್ಕ್, ಸುದರ್ಶನ ಪಾತಿಕಲ್ಲು, ಅಬ್ದುಲ್ ಕುಂಞಿ ನೇಲ್ಯಡ್ಕ, ಚಂದ್ರಶೇಖರ ನಡುಮನೆ, ಚಂದ್ರಶೇಖರ ಪನ್ನೆ, ಪ್ರದೀಪ್ ಕಣಕ್ಕೂಡು, ಚನಿಯ ಕಲ್ತಡ್ಕ, ಅನೂಪ್ ಬಿಳಿಮಲೆ, ಹೇಮಂತ್ ಮಠ ಮೊದಲಾದವರಿದ್ದರು.
Post a Comment