ಕಾರ್ಕಳ ಬೈಲೂರ್ ಉಮಿಕಲ್ ಕುಂಜದಲ್ಲಿ ಪರಶುರಾಮರ ಮೂರ್ತಿ ನಿರ್ಮಾಣ ಪ್ರಕರಣದಲ್ಲಿ ಅದರ ಶಿಲ್ಪಿ ಕೃಷ್ಣ ನಾಯ್ಕ್ ರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕ್ಯಾಲಿಕಟ್ ನಲ್ಲಿ ಈ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯ ಆಗಿದೆ.
ಕೃಷ್ಣ ನಾಯ್ಕ್ ರವರು ಕಾರ್ಕಳ ಪೊಲೀಸರು ತನ್ನ ಮೇಲೆ ಹಾಕಿದ ಕೇಸ್ ಗೆ ನಿರೀಕ್ಷಣ ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕಾರ ಮಾಡಿತ್ತು. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು ಈ ಮೂರ್ತಿ ವಿಚಾರದಲ್ಲಿ ಇನ್ನಷ್ಟು ಮಾಹಿತಿ ಲಭ್ಯ ಆಗಬೇಕಿದೆ.
Post a Comment