ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ, ರೈತರ ಜಮೀನು ಮುಟ್ಟಿದವರು ಕುರ್ಚಿ ಮೇಲೆ ಕೂರಲು ಆಗಲ್ಲ: ಈ ಎಚ್ಚರಿಕೆ ಕೊಟ್ಟವರ್ಯಾರು.?


 ಬೆಂಗಳೂರು; ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂಡಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ವಕ್ಸ್ ನೊಟಿಫಿಕಿಷನ್ ರದ್ದು ಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.



ರಾಜ್ಯ ಸರ್ಕಾರ ವಕ್ಪ್ ಬೋರ್ಡ್ ಮೂಲಕ ರೈತರಿಗೆ ನೊಟೀಸ್ ನೀಡಿರುವುದನ್ನು ಖಂಡಿಸಿ ಶಿಗ್ಗಾವಿ ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಶಿಗ್ಗಾವಿ ತಾಲೂಕಿನ ಸರ್ವೆ ನಂಬರ್ 417 ರಲ್ಲಿ ನೂರಾರು ಜನ ಬಡವರಿಗೆ ಸ್ಲಮ್ ಬೋರ್ಡ್ ನಿಂದ ಮನೆ ಕಟ್ಟಲು ಅನುಮತಿ ನೀಡಿದ್ದೇವೆ. ಅದು ವಕ್ಪ್ ಆಸ್ತಿ ಅಂತ ದಾವೆ ಹೂಡಿದ್ದಾರೆ. ಶಿಗ್ಗಾವಿ ಬಡವರಿಗೆ

ತಲೆ ಮೇಲೆ ಸೂರು ಇಲ್ಲದಂತ ವ್ಯವಸ್ಥೆ ಈ ವಕ್ಪ್ ಬೋರ್ಡ್ ನಿಂದ ಆಗಿದೆ ಎಂದು ಆರೋಪಿಸಿದರು.






ಶಿಗ್ಗಾವಿಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಮಾಡಲು ಹೋದಾಗ ಅದು ವಕ್ಪ್ ಆಸ್ತಿ ಎಂದು ಅದರ ವಿರುದ್ದ ಕೊರ್ಟ್ ಗೆ ಹೊಗಿದ್ದಾರೆ. ಅದನ್ನು ಹೋರಾಡಿ ಗೆದ್ದಿದ್ದೇವೆ‌. ವಿದ್ಯುತ್ ಸ್ಟೇಷನ್ ಮಾಡಿದ್ದೇವೆ‌. ಕಿತ್ತೂರು

ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆ ಮಾಡಲು ಅಡ್ಡಿ ಮಾಡಿದರು ಅದರ ವಿರುದ್ದ ಹೋರಾಡಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಿದ್ದೇನೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾನು ಕೆಲವೇ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ತಡಸ್ ಬಳಿ ಲಂಬಾಣಿ ತಾಂಡಾ ಇರುವ 19 ಎಕರೆ ಜಮೀನು ವಕ್ಪ್ ಆಸ್ತಿ ಎಂದು ಮಾಡಿದ್ದಾರೆ ಎಂದರು.



ನಾನು ವಕ್ಪ್ ಬೋರ್ಡ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿದ್ದವರು ಕಾಂಗ್ರೆಸ್ ನವರು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಚೀಟಿ ಕೊಟ್ಟರು, ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರೇ ವಕ್ಪ್ ಆಸ್ತಿ ನುಂಗಿದ್ದಾರೆ ಅದನ್ನು ವಾಪಸ್ ಪಡೆಯಬೇಕು ಎಂದು ವಕ್ಪ್ ಬೋರ್ಡ್ ಗೆ ಹೇಳಿದ್ದೆ, ಅದನ್ನು ಈಗ ತಿರುಚಿ ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂದು ತಿರುಚುತ್ತಿದ್ದಾರೆ. ನಾನು ಹಾಗೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.



ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೊಟಿಸ್ ವಾಪಸ್ ಪಡೆದರೆ ಸಾಲದು, ವಕ್ಪ್ ಗೆಜೆಟ್ ನೊಟೀಫಿಕೇಶನ್ ವಾಪಸ್ ಪಡೆಯಬೇಕು, ಅಷ್ಟೇ ಅಲ್ಲ, ವಕ್ಪ್ ಕಾಯ್ದೆ ರದ್ದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಪ್ರಧಾನಿ ಮೋದಿಯವರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ‌ ಎಂದರು.



ನಿಮ್ಮ ಜಮೀನು ರಕ್ಷಣೆ ನನ್ನದು


ಶಿಗ್ಗಾವಿ ಸವಣೂರು ರೈತರು ನಿಮಗೆ ವಕ್ಪ್ ಬೋರ್ಡ್ ನಿಂದ ಬಂದ ನೊಟಿಸನ್ನು ನನ್ನ ಕಚೇರಿಗೆ ತಂದು ಕೊಡಿ ನಿಮ್ಮ ಪರವಾಗಿ ನಾನು ನ್ಯಾಯಾಲಯದಲ್ಲಿ ಹೊರಾಟ ಮಾಡುತ್ತೇನೆ. ಶಿಗ್ಗಾವಿ ಸವಣೂರಿನ ರೈತರ

ಒಂದಿಂಚು ಜಮೀನು ಬಿಡುವುದಿಲ್ಲ. ನಿಮ್ನ ಜಮೀನಿನ ಜವಾಬ್ದಾರಿ ನನಗೆ ಬಿಡಿ, ನಾನು ರಕ್ಚಣೆ ನೀಡುತ್ತೇನೆ ಎಂದು ಭರವಸೆ ನೀಡಿದರು.


ಈಗ ಉಪ ಚುನಾವಣೆ ನಡೆಯುತ್ತಿರುವುದು ಬಿಜೆಪಿ ಹಾಗೂ ಲ್ಯಾಂಡ್ ಜಿಹಾದ್ ನಡೆಸುತ್ತಿರುವ ಕಾಂಗ್ರೆಸ್ ವಿರುದ್ದ, ಈ ಕ್ಷೇತ್ರದಲ್ಲಿ ಸೌಹಾರ್ದತೆ ಇರಬೇಕು, ಹೆಣ್ಣುಮಕ್ಕಳು ಸುರಕ್ಷಿತವಾಗಿ ಶಾಲಾ ಕಾಲೇಜಿಗೆ ಹೋಗಬೇಕು. ಪೊಲಿಸ್ ದೌರ್ಜನ್ಯ ನಿಲ್ಲಬೇಕು. ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಅವರಿಗೆ ಪಾಠ ಕಲಿಸಬೇಕು‌ ಎಂದು ಹೇಳಿದರು.




ನಮ್ಮ ಸಣ್ಣ ಸಣ್ಣ ಮಕ್ಕಳನ್ನು ಪೊಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕಡಕೋಳ್ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಉಳಿಸೇ ಉಳಿಸುತ್ತೇವೆ. ರೈತರ ಭೂಮಿ ಉಳಿಸುತ್ತೇವೆ ಎಂದು ಇದೇ ವೇಳೆ ಪ್ರತಿಜ್ಞೆ ಮಾಡಿದರು.




ಪ್ರತಿಭಟನಾ ರ್‍ಯಾಲಿಯಲ್ಲಿ ಮಾಜಿ ಸಚಿವರಾದ ಸಿ.ಟಿ‌. ರವಿ, ರಾಜು ಗೌಡ, ಸಿ.ಸಿ‌.ಪಾಟೀಲ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಪಿ. ರಾಜೀವ್ , ದತ್ತಾತ್ರೇಯ ಪಾಟೀಲ್ ರೇವೂರ ಹಾಜರಿದ್ದರು.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget