ಗೂಗಲ್ ಪೇ, ಫೋನ್ ಪೇ ಮೂಲಕ ಪಾವತಿಸುವ ವ್ಯವಸ್ಥೆ ಜಾರಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ.
ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ನೀವು ಇನ್ನು ಮುಂದೆ ಡಿಜಿಟಲ್ ಪೇಯ್ಮೆಂಟ್ ಗೆ ಮಾಡಿ ಟಿಕೆಟ್ ಪಡೆದುಕೊಳ್ಳಬಹುದಾಗಿದ್ದು, ಡಿಜಿಟಲ್ ಪವಾತಿಗೆ (ನಗದು ರಹಿತ ವಹಿವಾಟು) ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಇದುವರೆಗೂ ಕೆಎಸ್ಆರ್ಟಿಟಿಸಿಯ 8,800 ಬಸ್ ಗಳಲ್ಲಿ UPI ಮಷಿನ್ ಗಳು ಅಳವಡಿಕೆಗಾಗಿ ಸಿದ್ಧವಾಗಿದ್ದು, ಡಿಜಿಟಲ್ ಮಷಿನ್ ನಲ್ಲಿ UPI ಪೇಮೆಂಟ್ ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಕಂಡಕ್ಟರ್ ಗಳಿಗೆ ತರಬೇತಿ ನೀಡಿದ ಬಳಿಕ 10,000 ಹೆಚ್ಚು ಮಷಿನ್ ಗಳನ್ನು ಅಳವಡಿಕೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಡಿಜಿಟಲ್ ಪಾವತಿ’ಗೆ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿ ಮಾಡಬಹುದು. ಇಷ್ಟು ದಿನ ಕೆಎಸ್ ಆರ್ ಟಿಸಿಯಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇರಲಿಲ್ಲ. ಇದರಿಂದ ಚಿಲ್ಲರೆ ಸಮಸ್ಯೆ ಪ್ರಯಾಣಿಕರನ್ನು ಕಾಡ್ತಿತ್ತು.
ಸಂಸ್ಥೆಯ ಹೊಸ ನಿಯಮದ ಪ್ರಕಾರ, ಆನ್ ಲೈನ್ ಮೂಲಕವೂ ಹಣ ಪಾವತಿಸಲು ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣದ ವೇಳೆ ಆಗುವ ಕಿರಿಕಿರಿ ತಪ್ಪಲಿದೆ. ಕೆಲವು ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡದೇ ಇರುವ ಪ್ರಕರಣಗಳು ಸಹ ತಪ್ಪಲಿದೆ. ಚಿಲ್ಲರೆ ಇದ್ದೂ ಹಣ ನುಂಗಲು ಕುತಂತ್ರ ಮಾಡುತ್ತಿದ್ದ ಕಂಡಕ್ಟರ್ ಗಳ ಹಪಾಹಪಿ ತನಕ್ಕೂ ಬ್ರೇಕ್ ಬೀಳಿಲಿದೆ
Post a Comment