ಬೆಂಗಳೂರು : ರಾಜ್ಯದ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಇಲಾಖೆ 2024 ನೇ ಸಾಲಿನ ಕಲೋತ್ಸವ ಸ್ಪರ್ಧೆ ಆಯೋಜಿಸಲು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಅರ್ಹತೆ:
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 9ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಲಾ ಉತ್ಸವವು 'ದಿವ್ಯಾಂಗ' ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಒಂದು ಕಲೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಫ್‌ಲೈನ್ ಮೂಲಕ ನಡೆಸಲಾಗುವುದು. ಹಿಂದಿನ ವರ್ಷಗಳಲ್ಲಿ ರಾಷ್ಟ್ರಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.
ಕಾರ್ಯಕ್ರಮ ಅನುಷ್ಠಾನ ಪ್ರಕ್ರಿಯೆ:
ಶಾಲಾ ಹಂತ
ಇದು ಕಲೋತ್ಸವದ ಪ್ರಥಮ ಹಂತವಾಗಿದೆ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಕಲೋತ್ಸವದ ಮಾರ್ಗಸೂಚಿಯಂತೆ ಮಾರ್ಗದರ್ಶನ ನೀಡುವುದು ಹಾಗೂ ವಿದ್ಯಾರ್ಥಿಗಳು ಸ್ಪರ್ಧೆಯ ನಿಯಮಗಳನ್ನು ತಿಳಿದುಕೊಂಡು ತಮ್ಮ ಕಲಾ ಪ್ರಕಾರವನ್ನು (ಪ್ರದರ್ಶನ ಮತ್ತು ರಚನೆ) 5 (30MB) https://sdcedn.karnataka.gov.in ವೆಬ್‌ಸೈಟ್‌ನಲ್ಲಿರುವ ಲಿಂಕ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಗುರುತಿನ (ಸ್ಯಾಟ್ಸ್) ಸಂಖ್ಯೆಯನ್ನು ನಮೂದಿಸಿ, ತಮ್ಮ ಪ್ರಸ್ತುತಿಯನ್ನು ಹಾಗೂ ಪ್ರಸ್ತುತಿಯ ಕುರಿತು ಸಾರಾಂಶವನ್ನು 100 ಪದಗಳಿಗೆ ಮೀರದಂತೆ ಕಂಪ್ಯೂಟರ್ ವರ್ಡ್ ಡಾಕ್ಯುಮೆಂಟ್ ರೂಪದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಟೈಪ್ ಮಾಡಿ ಕೊಟ್ಟಿರುವ ಸೂಕ್ತ ಸ್ಥಳದಲ್ಲಿ ದಿನಾಂಕ:22.11.2024 ರೊಳಗೆ ಅಪ್‌ಲೋಡ್ ಮಾಡಲು ಕ್ರಮ ವಹಿಸುವುದು. (ಕಲೆಯ ಸ್ಥಳ, ಮೂಲ, ಅದರ ಅಭ್ಯಾಸದಲ್ಲಿ ತೊಡಗಿರುವ ಸಮುದಾಯಗಳು, ಯಾವ ವಿಶೇಷ ಸಂದರ್ಭಗಳಲ್ಲಿ ಕಲಾಪ್ರಕಾರವನ್ನು ತಯಾರಿಸಲಾಗುವುದು/ಪ್ರದರ್ಶಿಸಲಾಗುತ್ತದೆ. ವೇಷಭೂಷಣಗಳು, ಜೊತೆಯಲ್ಲಿರುವ ವಾದ್ಯಗಳು, ಪರಿಸರದೊಂದಿಗೆ ಅದರ ಸಂಪರ್ಕ, ಅದರ ಶೈಲಿ, ತಂತ್ರಗಳು, ಯಾವ ವಸ್ತುಗಳನ್ನು ಬಳಸಲಾಗುತ್ತದೆ. ಇತ್ಯಾದಿಗಳನ್ನೊಳಗೊಂಡ ಕಲಾ ಪ್ರಕಾರ ಕುರಿತು ಸಾರಾಂಶವನ್ನು ಛಾಯಚಿತ್ರದೊಂದಿಗೆ ಸಲ್ಲಿಸುವುದು) ಪ್ರಸ್ತುತಿಯನ್ನು ಅಪ್‌ಲೋಡ್ ಮಾಡಿದ ಕೂಡಲೇ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶ ತಲುಪುವುದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪ್ರಮಾಣಪತ್ರವನ್ನು ಪಡೆಯಲು ಸೂಚಿಸುವುದು.
Post a Comment