ಬೆಂಗಳೂರು: ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆಗೆ ಕಾನೂನು ಜಾರಿಗೆ ತರುವುದಾಗಿ ಬಿಬಿಎಂಪಿ ಮುಖ್ಯ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್ ಘೋಷಿಸಿದ್ದಾರೆ.
ಬಿಬಿಎಂಪಿ ನೌಕರರ ಕನ್ನಡ ಸಂಘ, ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಸಾಧಕ-ಸಾಧಕಿಯರಿಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡಿಗರು ಕಾನೂನು ಕೈಗೆತ್ತಿಕೊಳ್ಳಬಾರದು. ನಮಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಅಂಗಡಿ-ಮುಂಗಟ್ಟುಗಳಲ್ಲಿ ಅಳವಡಿಸಿರುವ ಫಲಕಗಳನ್ನು ಕನ್ನಡಕ್ಕೆ ಆದ್ಯತೆ ನೀಡಬೇಕು.ರಾಜ್ಯದ ಸಂಸ್ಕೃತಿಯನ್ನು ಹಲವು ವಿದೇಶಿಗರು ಹೊಗಳಿದ್ದಾರೆ. ನಗರಕ್ಕೆ ಬರುವ ವಲಸಿಗರು ತಮ್ಮ ಊರಿಗೆ ವಾಪಸ್ಸು ಹೋಗುವುದಿಲ್ಲ. ಅಂತಹ ಉತ್ತಮ ವಾತವರಣವಿದೆ. ಬೆಂಗಳೂರು ಹೆಮ್ಮೆಯ ನಗರವಾಗಿ ಬೆಳೆಯುತ್ತಿದ್ದು, ಇದಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಪರಿಶ್ರಮವೂ ಸಾಕಷ್ಟಿದೆ. ಪಾಲಿಕೆಯೂ ಸಹ ಕನ್ನಡ ಸಂಸ್ಕೃತಿ, ಭಾಷೆ ಉಳಿಸುವಿಗೆ ಕೊಡುಗೆ ನೀಡುತ್ತಿದೆ ಎಂದರು.
Post a Comment