ಭಾರತದ ಮುಂದೆ ತಲೆಕೆಳಗಾದ ಕೆನಡಾ ಲೆಕ್ಕಚಾರ!!


 ಕೆನಡಾದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿದ್ದು, ಕೆನಡಾ ಸರ್ಕಾರದ ವಿರುದ್ಧ ಭಾರತವು ಇಷ್ಟು ದಿನ ಮಾಡಿಕೊಂಡು ಬಂದಿದ್ದ ಆರೋಪ ಸಾಬೀತಾದಂತಾಗಿದೆ. ಅಲ್ಲದೇ ಕೆನಡಾ ಪೊಲೀಸರ ಕ್ರಮದಿಂದಲೇ ಕೆನಡಾ ಸರ್ಕಾರಕ್ಕೆ ಭಾರೀ ಮುಜುಗರ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಕೆನಡಾದ ನಡುವೆ ಸಂಬಂಧ ಉತ್ತಮವಾಗಿಲ್ಲ.


ಅಲ್ಲದೇ ಕೆನಡಾ ಸರ್ಕಾರ ತನ್ನ ಮೊಂಡು ವಾದವನ್ನು ಮುಂದುವರಿಸಿಕೊಂಡೇ ಬರುತ್ತಿದೆ. ಆದರೆ, ಕೆನಡಾ ಸರ್ಕಾರದ ಲೆಕ್ಕಾಚಾರಗಳು ಕೆನಡಾದಲ್ಲೇ ತಲೆಕೆಳಗಾಗಿವೆ.

ಕೆನಡಾದಲ್ಲಿ ಭಾರತದ ಮೋಸ್ಟ್‌ ವಾಂಟೆಡ್‌ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಆಗಿತ್ತು. ಇದನ್ನು ಭಾರತದ ನೆರವಿನೊಂದಿಗೆ ಮಾಡಲಾಗಿದೆ. ಭಾರತದ ಕೈವಾಡ ಈ ಹತ್ಯೆಯ ಹಿಂದೆ ಇದೆ ಎಂದು ಕೆನಡಾ ಆರೋಪ ಮಾಡಿತ್ತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತ್ತೊಂದು ರಾಷ್ಟ್ರ ಹಸ್ತಕ್ಷೇಪ ಮಾಡುವುದನ್ನು ನಾವು ಸಹಿಸುವುದಿಲ್ಲ. ಭಾರತದ ಈ ಕ್ರಮವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ವಿಶ್ವದ ಮುಂದೆ ಕೆನಡಾ ಹೇಳಿತ್ತು. ಅಮೆರಿಕ ಸಹ ಇದರಲ್ಲಿ ಮೂಗು ತೂರಿಸಿತ್ತು. ಈ ಬೆಳವಣಿಗೆಗಳಿಗೆ ಭಾರತ ಹಾಗೂ ವಿದೇಶಾಂಗ ಇಲಾಖೆಯು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.


ಇದೀಗ ಕೆನಡಾದಲ್ಲಿ ನಡೆದ ಶೂಟೌಟ್ ಒಂದಕ್ಕೆ ಸಂಬಂಧಿಸಿದಂತೆ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಖಲಿಸ್ತಾನಿ ಉಗ್ರ ಅರ್ಶದೀಪ್ ದಲ್ಲಾ ಎಂಬವನನ್ನು ಅಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆನಡಾದಲ್ಲಿ ನಿಷೇಧಿತ ಖಲಿಸ್ತಾನಿ ಸಂಘಟನೆಯ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಅನುಮಾನಾಸ್ಪದ ರೀತಿಯಲ್ಲಿ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿತ್ತು. ಈ ಹತ್ಯೆಯ ನಂತರದಲ್ಲಿ ಭಾರತ ಹಾಗೂ ಕೆನಡಾದ ನಡುವೆ ಹೇಳಿಕೊಳ್ಳುವಂತಹ ಸಂಬಂಧ ಉಳಿದಿಲ್ಲ.

ಕೆನಾಡದಲ್ಲಿ ಮಿಲ್ಟನ್‌ನಲ್ಲಿ ಇದೇ ಅಕ್ಟೋಬರ್ 27 ಹಾಗೂ 28 ರಂದು ಶೂಟೌಟ್ ನಡೆದಿತ್ತು. ಇದು ಕೆನಡಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈಚೆಗೆ ಇಲ್ಲಿ ಪ್ರತಿಭಟನೆ ಮಿತಿ ಮೀರಿ ನಡೆಯುತ್ತಿದೆ. ಖಲಿಸ್ತಾನಿ ಪರವಾಗಿ ಇದ್ದೇವೆ ಎಂದು ಹೇಳಿಕೊಂಡು ಕೆಲವರು ಭಾರತದ ವಿರೋಧಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳ ಬಗ್ಗೆಯೂ ಭಾರತ ಮೊದಲಿನಿಂದಲೂ ತನ್ನ ವಿರೋಧವನ್ನು ದಾಖಲಿಸಿಕೊಂಡೇ ಬಂದಿದೆ.


ಇನ್ನು ಈಚೆಗೆ ನಡೆದ ಶೂಟೌಟ್‌ ಸಂದರ್ಭದಲ್ಲಿ ಅರ್ಶದೀಪ್ ದಲ್ಲಾ ಅಲ್ಲೇ ಇದ್ದ ಎನ್ನಲಾಗಿತ್ತು. ಇದೀಗ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರರಲ್ಲಿ ಒಬ್ಬನಾಗಿದ್ದ. ಇವನ ಹತ್ಯೆಯ ನಂತರ ಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಭಾರತವು ಸಹ ಆತನ ಹತ್ಯೆಗೆ ಮುಂಚೆಯೇ ಕೆಲವು ಪ್ರಮುಖ ಉಗ್ರರ ಲಿಸ್ಟ್‌ ಮಾಹಿತಿಯನ್ನು ಕೆನಡಾಗೆ ನೀಡಿತ್ತು.


ಕೆನಡಾಗೆ ಮುಜುಗರ: ಕೆನಡಾ ಸರ್ಕಾರ ತನ್ನದೇ ನೆಲದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಅದಕ್ಕೆ ಮುಖ್ಯ ಕಾರಣ ಭಾರತದ ಪ್ರಮುಖ ಉಗ್ರ ಅರ್ಶದೀಪ್ ದಲ್ಲಾ ಕೆನಡಾದಲ್ಲೇ ಸರೆ ಸಿಕ್ಕಿರುವುದು. ಈ ಮೂಲಕ ಭಾರತದ ವಿರೋಧಿ ಚಟುವಟಿಕೆಯಲ್ಲಿ ಇರುವವರಿಗೆ ಕೆನಡಾ ಸರ್ಕಾರ ಆಶ್ರಯ ಕಲ್ಪಿಸುತ್ತಿದೆ ಎನ್ನುವ ಗಂಭೀರ ಆರೋಪಕ್ಕೆ ಇದೀಗ ಪುಷ್ಠಿ ನೀಡಿದಂತಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget