ಪ್ಲೇ ಸ್ಟೋರ್-ಆ್ಯಪ್ ಸ್ಟೋರ್​ನಿಂದ ಆ್ಯಪ್ ಡೌನ್‌ಲೋಡ್ ಮಾಡುಕೊಳ್ಳುತ್ತಿರಾ...?? ಇಲ್ಲಿದೆ ನಿಮಗೆ ಉಪಯುಕ್ತ ಮಾಹಿತಿ



ಪ್ರಪಂಚದಾದ್ಯಂತ ಪ್ರತಿ ವರ್ಷ ಶತಕೋಟಿ ಅಪ್ಲಿಕೇಶನ್‌ಗಳು ಡೌನ್‌ಲೋಡ್ ಆಗುತ್ತವೆ. ಆದರೆ ನೀವು ತಪ್ಪಾದ ಅಪ್ಲಿಕೇಶನ್ (ನಕಲಿ ಅಪ್ಲಿಕೇಶನ್‌ಗಳು) ಅನ್ನು ಡೌನ್‌ಲೋಡ್ ಮಾಡಿದರೆ ಅದು ನಿಮ್ಮ ಸ್ಮಾರ್ಟ್​ಫೋನ್​ಗೆ ಹಾನಿಯನ್ನುಂಟುಮಾಡುತ್ತದೆ. ಕೆಲವೊಮ್ಮೆ ಇದರಿಂದ ನೀವು ದೊಡ್ಡ ನಷ್ಟವನ್ನು ಅನುಭವಿಸಿಬಹುದು. ಆದರೆ, ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು, ಯಾವ ಅಪ್ಲಿಕೇಶನ್ ಅಸಲಿ ಮತ್ತು ಯಾವುದು ನಕಲಿ ಎಂದು ತಿಳಿಯುವುದು ಕಷ್ಟ. ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್‌ಗಳು ನಕಲಿಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಈ ವಿಧಾನಗಳನ್ನು ಪ್ರಯತ್ನಿಸಬಹುದು. ಗೂಗಲ್ ಅಥವಾ ಆ್ಯಪಲ್ ಫೇಕ್ ಆ್ಯಪ್​ಗಳ ವಿರುದ್ಧ ಕಾಲಕಾಲಕ್ಕೆ ಕ್ರಮ ಕೈಗೊಳ್ಳುತ್ತಿದ್ದರೂ ಸಾವಿರಾರು ನಕಲಿ ಅಪ್ಲಿಕೇಶನ್ ಗಳು ಲಭ್ಯವಿವೆ. ಅವುಗಳಲ್ಲಿ ಹಲವು ಜಾಹೀರಾತುಗಳನ್ನು ತೋರಿಸುವ ಮೂಲಕ ಹಣವನ್ನು ಗಳಿಸಿದರೆ, ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು ಡೇಟಾವನ್ನು ಕದಿಯುವುದು ಮಾತ್ರವಲ್ಲದೆ ನಿಮ್ಮ ಫೋನ್‌ನ ಮೇಲೆ ಪರಿಣಾಮ ಬೀರಬಹುದು. ಇದರಿಂದ ಪಾರಾಗಲು ನೀವು ಕೆಳಗೆ ನೀಡಿರುವ ಕೆಲವು ಎಚ್ಚರಿಕೆಯನ್ನು ಗಮನಿಸಿ. ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್​ನ ಆ್ಯಪ್ ಸ್ಟೋರ್ ಅಥವಾ ಯಾವುದೇ ಜಾಹೀರಾತು ಲಿಂಕ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅನೇಕ ಬಾರಿ ಅಸಲಿ ಮತ್ತು ನಕಲಿ ಅಪ್ಲಿಕೇಶನ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಜನರು ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಬಿಡುತ್ತಾರೆ. ಆದ್ದರಿಂದ ಅಪ್ಲಿಕೇಶನ್ ಹೆಸರು ಕಾಗುಣಿತ ಮತ್ತು ಐಕಾನ್ ಅನ್ನು ಸರಿಯಾಗಿ ಪರಿಶೀಲಿಸಿ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget