ಸೋಲು.. ಸೋಲು.. ಸೋಲು..ರಾಜಕೀಯದಲ್ಲೂ ನೆಲೆ ನಿಲ್ಲಲು ಆಗ್ತಿಲ್ಲ. ಸಿನಿಮಾ ಕ್ಷೇತ್ರದಲ್ಲೂ ಗೆಲ್ಲಲು ಆಗ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಕುಮಾರಸ್ವಾಮಿಯ ಮಗ ಹಾಗೂ ನಟ ನಿಖಲ್ ಕುಮಾರಸ್ವಾಮಿಯ (Nikhil Kumaraswamy) ಭವಿಷ್ಯ ಇಂದು ಅತಂತ್ರವಾಯ್ತಾ?
ಮತ್ತೆ ಚಕ್ರವ್ಯೂಹದಲ್ಲಿ ಸಿಲುಕಿ ಬಿಟ್ರಾ ನಿಖಿಲ್ ಕುಮಾರಸ್ವಾಮಿ? ಎಂಬ ಪ್ರಶ್ನೆಗಳು ಬೆಂಬಲಿಗರನ್ನು ಕಾಡ್ತಿದೆ. 2024ರ ಕರ್ನಾಟಕದ ಉಪಚುನಾವಣೆಯಲ್ಲಿ (Karnataka By Election) ಚನ್ನಪಣ್ಣದ (Channapattana) ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿಗೆ ಭಾರೀ ಹಿನ್ನಡೆಯಾಗಿದೆ. ಮನೆ ಮಗನ ಸತತ ಸೋಲು ಗೌಡರ ಕುಟುಂಬಕ್ಕೆ ದೊಡ್ಡ ಆಘಾತ ಉಂಟುಮಾಡಿದೆ.
ಯೋಗೇಶ್ವರ್ ವಿರುದ್ಧ ನಿಖಿಲ್ಗೆ ಮುಖಭಂಗ!
ಕರ್ನಾಟಕ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋತಿದ್ದಾರೆ. ಸಾಲು ಸಾಲು ಸೋಲು ನಿಖಿಲ್ ನಿದ್ದೆಗೆಡಿಸಿದೆ. ಈ ಹಿಂದೆ ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ನಿಖಿಲ್ ಈ ಬಾರಿ ಗೆದ್ದೇ ಗೆಲ್ಲುವ ನಿರೀಕ್ಷೆಯಲ್ಲಿದ್ರು. ಆದ್ರೆ ಮತ್ತೆ ಪರಾಜಯ ನಿಖಿಲ್ ಪಾಲಾಯ್ತು.
ಜೆಡಿಎಸ್ ಭದ್ರಕೋಟೆಗಳಲ್ಲೇ ಸಿಗಲಿಲ್ಲ ಗೆಲುವು!
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಇದು ಭಾರೀ ಹಿನ್ನಡೆಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಷ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿದಿದ್ರು. ಆದ್ರೆ ಕುಮಾರಸ್ವಾಮಿಯ ಚಾಲೆಂಜ್, ನಿಖಿಲ್ ಮೊದಲ ಶ್ರಮ ಅಲ್ಲಿಯೂ ಗೆಲ್ಲಲಿಲ್ಲ.
ಬಳಿಕ 2023ರಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದ್ರು. ಅಲ್ಲೂ ಕೂಡ ನಿಖಿಲ್ಗೆ ಜಯ ಸಿಗಲಿಲ್ಲ. ಇದೀಗ ಚನ್ನಪಣ್ಣದ ಕಥೆ ಕೂಡ ಅದೇ ಆಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. 3ನೇ ಬಾರಿಯೂ ಪಾಲಿಟಿಕ್ಸ್ ಮಾಡುವಲ್ಲಿ ಕುಮಾರಣ್ಣ ಪುತ್ರ ಸೋತಿದ್ದಾರೆ. ಜೆಡಿಎಸ್ ಭದ್ರಕೋಟೆಗಳು ಛಿದ್ರ ಛಿದ್ರವಾಗಿದೆ.
ಸಿನಿಮಾದಲ್ಲೂ ಸಾಲು ಸಾಲು ಸೋಲು!
ರಾಜಕೀಯಕ್ಕೂ ಮುನ್ನ ನಿಖಿಲ್ ಎಂಟ್ರಿ ಕೊಟ್ಟಿದ್ದು ಚಿತ್ರರಂಗಕ್ಕೆ, ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ರು. ನಿಖಿಲ್ ಜಾಗ್ವಾರ್ ಸಿನಿಮಾ ಕೂಡ ಹೇಳಿಕೊಳ್ಳುವಂತ ಯಶಸ್ಸು ನೀಡಲಿಲ್ಲ. ಮೊದಲ ಸಿನಿಮಾದಲ್ಲಿ ನಟನೆ ವಿಚಾರಕ್ಕೆ ನಿಖಿಲ್ ಟ್ರೋಲ್ ಆಗಿದ್ರು.
ಅಭಿಮನ್ಯುವಿನ ಪಾತ್ರದಲ್ಲಿ ಕಾಣಿಸಿಕೊಂಡ ನಿಖಿಲ್!
ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಫ್ಯಾಮಿಲಿ ಎಂಟರ್ಟೈನರ್ ಸೀತಾರಾಮ ಕಲ್ಯಾಣದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿದ್ರು. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಿಖಿಲ್ ಜೋಡಿ ಅಭಿಮಾನಿಗಳಿಗೆ ಇಷ್ಟವಾಯ್ತು. ಸಿನಿಮಾ ಕೆಲ ದಿನಗಳ ಕಾಲ ಉತ್ತಮ ಪ್ರದರ್ಶನ ಕಂಡಿತ್ತು. ಬಳಿಕ ನಿಖಿಲ್ ಮುನಿರತ್ನರವರ ನಿರ್ಮಾಣದಲ್ಲಿ ಮೂಡಿಬಂದ ಅದ್ಧೂರಿ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ನೆಲಕಚ್ಚಿತ್ತು.
2021ರಲ್ಲಿ ಬಂದ ನಿಖಿಲ್ ಕುಮಾರಸ್ವಾಮಿ ಅಭಿನಯದ ವಿಜಯಕುಮಾರ ಕೊಂಡ ನಿರ್ದೇಶನದ ರೈಡರ್ ಸಿನಿಮಾ ಕೂಡ ಗೆಲ್ಲಲಿಲ್ಲ. ಪ್ರೊಡೆಕ್ಷನ್ 28 ಸಿನಿಮಾ ಕೂಡ ನಿಖಿಲ್ ಕೈಯಲ್ಲಿದೆ. ನಿಖಿಲ್ ಕುಮಾರಸ್ವಾಮಿ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುದೊಡ್ಡ ಪ್ರೊಡಕ್ಷನ್ ಹೌಸ್, ಲೈಕಾ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸತತ ಸೋಲುನಿಂದ ಕಂಗೆಟ್ಟ ನಿಖಲ್ ಮತ್ತೆ ಎದ್ದು ನಿಲ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
Post a Comment