ಮಂಗಳೂರು: ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್ಎಲ್) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಭಾನುವಾರ ವಿಮಾನ ನಿಲ್ದಾಣ 7,637 ಪ್ರಯಾಣಿಕರನ್ನು ನಿರ್ವಹಿಸಿದೆ. ಪ್ರಯಾಣಿಕರಲ್ಲಿ 7,498 ವಯಸ್ಕರು ಮತ್ತು 139 ಶಿಶುಗಳಿದ್ದರು. ಈ ಹಿಂದೆ ಡಿಸೆಂಬರ್ 31, 2023ರಂದು 7,548 ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದರು.
ಮಂಗಳೂರು ವಿಮಾನ ನಿಲ್ದಾಣ 25 ನವೆಂಬರ್ 2023ರಂದು 7,452 ಪ್ರಯಾಣಿಕರನ್ನು, ಆಗಸ್ಟ್ 15, 2024 ರಂದು 7,406 ಪ್ರಯಾಣಿಕರನ್ನು, ನವೆಂಬರ್ 19, 2023 ರಂದು 7,399 ಪ್ರಯಾಣಿಕರು ಮತ್ತು 10 ಡಿಸೆಂಬರ್ 2023 ರಂದು 7,350 ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವು ಒಂದೇ ದಿನದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದ ದಾಖಲೆಯಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
Post a Comment