ಮಹಾಲಕ್ಷ್ಮಿ ಕೋ ಅಪರೇಟಿವ್ ಪ್ರಕರಣ |ದೇವಸ್ಥಾನದೊಳಗೆ ಬುರ್ಖಾ ಧರಿಸಿದ ಮಹಿಳೆಯರ ಪ್ರವೇಶ | ರಘುಪತಿ ಭಟ್ ಕ್ಷಮೆಯಾಚಿಸಬೇಕು ಹಿಂದೂ ಯುವಸೇನೆ ಪ್ರತಿಭಟನೆಯ ಎಚ್ಚರಿಕೆ

 


ಉಡುಪಿ: ಶಾಸಕ ಯತ್ಪಾಲ್ ಸುವರ್ಣ ಅಧ್ಯಕ್ಷತೆಯ ಮಹಾಲಕ್ಷ್ಮೀ ಕೋಆಪರೇಟಿವ್‌ ಸೊಸೈಟಿ ಹಗರಣ ಆರೋಪಕ್ಕೆ ಆಣೆ ಪ್ರಮಾಣ ಸಂದರ್ಭ ಉಡುಪಿಯ (Udupi Temple) ಪ್ರಸಿದ್ದ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಬುರ್ಖಾ, ಹಿಜಾಬ್ ಮಹಿಳೆಯರು ಹಾಗೂ ಗೋಮಾಂಸ ಭಕ್ಷಕರು ಪಾದರಕ್ಷೆ ಧರಿಸಿ ಪ್ರವೇಶ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು ಅವರನ್ನು ದೇವಸ್ಥಾನಕ್ಕೆ ಕರೆತಂದ ಮಾಜಿ ಶಾಸಕ ರಘುಪತಿ ಭಟ್ ತಕ್ಷಣ ಹಿಂದೂ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಹಿಂದೂ ಯುವ ಸೇನೆ ಉಡುಪಿ ನಗರ ಅಧ್ಯಕ್ಷ ಸುನೀಲ್‌ ಪೂಜಾರಿ ನೇಜಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಮ್ಮದೇ ಮುಸ್ಲಿಂ ಸಮುದಾಯದ ಮಸೀದಿಯಲ್ಲಿ ಪ್ರವೇಶ ನಿಷೇಧ ಹೊಂದಿರುವ ಮಹಿಳೆಯರು ಮುಖವನ್ನು ಬುರ್ಖಾಧಾರಿ ಮುಸ್ಲಿಂ ಹಿಜಾಬ್‌ ಧರಿಸಿ ತಮ್ಮ ಮರೆಮಾಚಿ ದೇವಸ್ಥಾನಕ್ಕೆ ಪ್ರವೇಶ ನೀಡಿದ್ದು ಎಷ್ಟು ಸರಿ..? ಮೂರ್ತಿ ಪೂಜೆಯನ್ನು ನಂಬದೇ ಇರುವ ಗೋಮಾಂಸ ಭಕ್ಷಣೆ ಮಾಡುವ ವ್ಯಕ್ತಿಗಳಿಗೆ ಹಿಂದೂ ದೇವಸ್ಥಾನಕ್ಕೆ ಸಮಾಜದ ಪವಿತ್ರ ಬರಮಾಡಿಕೊಂಡು ನೇತೃತ್ವ ವಹಿಸಿದ ರಘುಪತಿ ಭಟ್ ಅದೇ ದೇವಸ್ಥಾನದ ಮೊಕೇಸರರಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು ಅಕ್ಷಮ್ಯ ಅಪರಾಧ ಎಂದವರು ಹೇಳಿದ್ದಾರೆ.



ಉಡುಪಿ ಹಿಜಾಬ್ ಗಲಾಟೆ ಸಂದರ್ಭದಲ್ಲಿ ಹಿಂದುತ್ವವಾದಿಯಂತೆ ಖಟ್ಟರ್ ಹೇಳಿಕೆ ನೀಡುತ್ತಿದ್ದ ರಘುಪತಿ ಭಟ್ ಇದೀಗ ಅದೇ ಹಿಜಾಬ್ ಮಹಿಳೆಯರ ನೆಚ್ಚಿನ ನಾಯಕರಾಗಿ ಹೇಳಿಕೆ ನೀಡುತ್ತಿರುವುದು ಅವರನ್ನು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ ಹಿಂದೂಗಳಿಗೆ ಮಾಡಿದ ಅಪಮಾನ.


ಹಿಂದೂ ಸಮಾಜದ ಮಾರ್ಗದರ್ಶಕರಾಗಿರುವ ಉಡುಪಿ ಅಷ್ಟ ಮಠಗಳ ಯತಿಗಳು ಸಹಿತ ಎಲ್ಲಾ ಧಾರ್ಮಿಕ ಮುಖಂಡರು ಇಂದಿನ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿ ಹಿಂದೂ ಸಮಾಜದ ಜನತೆಯ ಮುಂದೆ ರಘುಪತಿ ಭಟ್ ಕ್ಷಮೆಯಾಚನೆಗೆ ಸೂಚಿಸಬೇಕು ಹಾಗೂ ಅಪವಿತ್ರಗೊಂಡಿರುವ ಕರಂಬಳ್ಳಿ ದೇವಸ್ಥಾನವನ್ನು ತಕ್ಷಣ ಹಿಂದೂ ಸಂಪ್ರದಾಯದ ಪ್ರಕಾರ ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಇದೇ ರೀತಿ ರಘುಪತಿ ಭಟ್ ಮತೀಯ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮುಂದುವರಿದರೆ ಸಮಸ್ತ ಹಿಂದೂ ಕಾರ್ಯಕರ್ತರು ಜೊತೆಗೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget