ಗೃಹ ಮಂತ್ರಿಗೆ ತರಾಟೆ ತೆಗೆದುಕೊಂಡ DCM ಪವನ್ ಕಲ್ಯಾಣ್; TDP, ಜನಸೇನಾ ಮೈತ್ರಿಯಲ್ಲಿ ಬಿರುಕು?

 


ಆಂಧ್ರ ಪ್ರದೇಶದಲ್ಲಿ ಟಿಡಿಪಿ ಹಾಗೂ ಜನಸೇನಾ ಪಕ್ಷ ಒಟ್ಟಿಗೆ ಸೇರಿ ಚುನಾವಣಾ ಕಣಕ್ಕೆ ಇಳಿದು ಜಗನ್ ಸರ್ಕಾರವನ್ನು ಧೂಳಿಪಟಗೊಳಿಸಿ ಅಧಿಕಾರದ ಗದ್ದುಗೆಗೆ ಏರಿದೆ. ಚಂದ್ರಬಾಬು ನಾಯ್ಡು ಸಿಎಂ ಆದ್ರೆ ಪವನ್ ಕಲ್ಯಾಣ್​ ಡಿಸಿಎಂ ಆಗಿ ಅದ್ಭುತ ಆಡಳಿತ ಕೊಡುವ ನಿರೀಕ್ಷೆ ಹುಟ್ಟಿಸಿದ್ದರು. ಆದ್ರೆ ಈ ಮೈತ್ರಿಗೆ ಆರಂಭದಲ್ಲಿಯೇ ಕಂಟಕ ಎದುರಾಗಿದೆಯಾ ಅನ್ನೋ ಅನುಮಾನ ಮೂಡುತ್ತಿದೆ. ಸರ್ಕಾರ ರಚನೆಯಾಗಿ ಆರು ತಿಂಗಳಲ್ಲಿಯೇ ಸರ್ಕಾರದ ಗೋಡೆಗಳಲ್ಲಿ ಬಿರುಕು ಮೂಡಲು ಶುರು ಆಗಿವೆಯಾ ಅನ್ನೋ ಅನುಮಾನಗಳು ಮೂಡುತ್ತಿವೆ. ಕಾರಣ, ಪವನ್ ಕಲ್ಯಾಣ್ ಆಡಿದ ಆ ಒಂದು ಮಾತು.



ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್​ ತಮ್ಮದೇ ಸರ್ಕಾರದ ಗೃಹಮಂತ್ರಿಯ ವಿರುದ್ಧ ಗುಡುಗಿದ್ದಾರೆ. ಸರಿಯಾಗಿ ಕೆಲಸ ಮಾಡಿದಿದ್ದರೆ ನಾನೇ ನಿಮ್ಮ ಗೃಹಮಂತ್ರಿ ಸ್ಥಾನದಲ್ಲಿ ಬಂದು ಕೂರಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದು ಮೈತ್ರಿ ಪಡೆಯಲ್ಲಿ ಸಣ್ಣದೊಂದು ಸಂಚಲನವನ್ನು ಸೃಷ್ಟಿ ಮಾಡಿದೆ.






ಪವನ್ ಕಲ್ಯಾಣ್ ಗೃಹ ಸಚಿವೆ ಅನಿತಾ ಅವರ ವಿರುದ್ಧ ಗುಡುಗಲು ಕೂಡ ಕಾರಣ, ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯ. ಮಹಿಳೆಯ ಮೇಲೆ ನಡೆಯುತ್ತಿರುವ ಕ್ರೈಂಗಳನ್ನು ತಡೆಗಟ್ಟಲು ನಿಮಗೆ ಆಗದಿದ್ದಲ್ಲಿ ಆ ನಿಮ್ಮ ಸ್ಥಾನ ಬಿಟ್ಟು ಕೆಳಗೆ ಇಳಿಯಿರಿ ಇಲ್ಲವಾದಲ್ಲಿ ನಾನೇ ಗೃಹಮಂತ್ರಿ ಸ್ಥಾನಕ್ಕೆ ಬಂದು ಕೂರುತ್ತೇನೆ ಎಂದು ಪವನ್ ಕಲ್ಯಾಣ್ ಗುಡುಗಿದ್ದಾರೆ.



ಆಂಧ್ರಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಅಕ್ಷರಶಃ ಕದಡಿ ಹೋಗಿದೆ. ಕಾನೂನು ಸುವ್ಯವಸ್ಥೆಯನ್ನು ಉತ್ತರಪ್ರದೇಶದಲ್ಲಿ ಹೇಗೆ ಯೋಗಿ ಆದಿತ್ಯನಾಥ್​ ನಿರ್ವಹಿಸುತ್ತಿದ್ದಾರೋ ಹಾಗೆ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ಹೀಗಾಗಿ ನಾನು ಅನಿತಾ ಅವರಿಗೆ ಹೇಳುತ್ತೇನೆ. ನೀವು ಗೃಹಮಂತ್ರಿ, ನಾನು ಪಂಚಾಯತ್ ರಾಜ್ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಮಂತ್ರಿ. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿ ಇಲ್ಲವಾದರೆ ನಾನು ಒತ್ತಾಯಪೂರ್ವಕವಾಗಿ ನಿಮ್ಮ ಗೃಹ ಇಲಾಖೆಯನ್ನು ನನ್ನ ಸುಪರ್ದಿಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠಪುರಂ ವಿಧಾನಸಭಾ ಕ್ಷೇತ್ರದ ಱಲಿಯಲ್ಲಿ ಹೇಳಿದ್ದಾರೆ.



ನೀವು ಯೋಗಿ ಆದಿತ್ಯನಾಥರಂತೆ ಕೆಲಸ ಮಾಡಬೇಕು. ರಾಜಕೀಯ ನಾಯಕರು ಶಾಸಕರು ಕೇವಲ ವೋಟು ಕೇಳಲು ಇರುವುದಲ್ಲ. ನಮಗೆ ನಮ್ಮದೇ ಆದ ಕೆಲವು ಕರ್ತವ್ಯಗಳು ಇವೆ. ಇದನ್ನು ಎಲ್ಲರೂ ವಿಚಾರ ಮಾಡಬೇಕು. ನಾನು ಗೃಹ ಇಲಾಖೆಯನ್ನು ಕೇಳುತ್ತಿದ್ದೇನೆ ತೆಗೆದುಕೊಳ್ಳುತ್ತೇನೆ ಅನ್ನುವದಲ್ಲ ಒಂದು ವೇಳೆ ಅದು ಆದಲ್ಲಿ ಬೇರೆಯದ್ದೇ ಕಥೆ ಆಗುತ್ತದೆ. ನಾವೆಲ್ಲರೂ ಯೋಗಿ ಆದಿತ್ಯನಾಥರಂತೆ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಅವರು ಬದಲಾಗುವುದಿಲ್ಲ. ಅದಕ್ಕಾಗಿ ನಿರ್ಧರಿಸಿ ನಿಮಗೆ ಬದಲಾಗುವ ವಿಚಾರ ಇದೆಯಾ ಇಲ್ಲವಾ ಎಂದು ಅನಿತಾರನ್ನು ಪ್ರಶ್ನಿಸಿದ್ದಾರೆ.






ಸದ್ಯ ಪವನ್ ಕಲ್ಯಾಣ ಆಡಿದ ಮಾತು ವಿಪಕ್ಷಗಳಿಗೆ ಅಸ್ತ್ರವಾಗಿ, ಆಡಳಿತ ಪಕ್ಷಕ್ಕೆ ಮುಜುಗರಕ್ಕೆ ತಳ್ಳಿದೆ. ಈ ಬಗ್ಗೆ ಮಾತನಾಡಿರುವ ಚಂದ್ರಬಾಬು ನಾಯ್ಡು ಸಂಪುಟದ ಹಿರಿಯ ಸಚಿವ ನಾರಾಯಣ ಅವರು, ಒಬ್ಬ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್​ಗೆ ತಪ್ಪುಗಳನ್ನು ಗುರುತಿಸುವ ಹಕ್ಕು ಇದೆ. ಅವರು ಸರಿಯಾಗಿಯೇ ಮಾತನಾಡಿದ್ದಾರೆ ಎಂದಿದ್ದಾರೆ.










Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget