ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ JCI ಪುತ್ತೂರು ಘಟಕದ 2025 ನೇ ಸಾಲಿನ ಅಧ್ಯಕ್ಷರಾಗಿ ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಚುನಾಯಿತರಾಗಿರುತ್ತಾರೆ. JCI ಮುಳಿಯ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ನಿಯೋಜಿತ ವಲಯ ಉಪಾಧ್ಯಕ್ಷ ಚುನಾವಣಾ ಅಧಿಕಾರಿ JC ಸುಹಾಸ್ ಮರಿಕೆ, ರಾಷ್ಟ್ರೀಯ ಸಂಯೋಜಕಿ JC ಸ್ವಾತಿ ಜೆ ರೈ , ಪೂರ್ವ ಅಧ್ಯಕ್ಷರಾದ JC ಶಶಿರಾಜ್ ರೈ, 2024 ರ ಸಾಲಿನ ಅಧ್ಯಕ್ಷ JC ಮೋಹನ್ ಕೆ ರವರುಗಳು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ JC ಮುರಳಿ ಶ್ಯಾಮ್, JC ವಿಶ್ವ ಪ್ರಸಾದ್ ಸೇಡಿಯಾಪು, JC ಜಗನ್ನಾಥ್ ರೈ ,JC ಶರತ್ ಕುಮಾರ್ ರೈ , JC ವಸಂತ್ ಜಾಲಾಡಿ , JC ಗೌತಮ್ ರೈ, JC ಮನೋಹರ್ ಕೆ, 2024 ರ ಕಾರ್ಯದರ್ಶಿ JC ಆಶಾ ಮುತ್ಲಾಜೆ ಹಾಗೂ JC ಸದಸ್ಯರೆಲ್ಲರೂ ಉಪಸಿತರಿದ್ದರು.
2025ರ ಸಾಲಿಗೆ ಅಧ್ಯಕ್ಷರಾಗಿ ನಿಯೋಜನೆಗೊಂಡ ಭಾಗ್ಯೇಶ್ ರೈ ರವರು ತನ್ನನ್ನು ಆಯ್ಕೆ ಮಾಡಿದ 2024ರ ಆಡಳಿತ ಮಂಡಳಿ, ಚುನಾವಣಾ ಅಧಿಕಾರಿಗಳಿಗೆ ಪೂರ್ವ ಅಧ್ಯಕ್ಷರಿಗೆ, JC ಯ ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಭಾಗ್ಯೇಶ್ ರೈ ರವರು ಪುತ್ತೂರು ತಾಲೂಕಿನ ಕೆಯ್ಯೂರಿನವರಾಗಿದ್ದು 2017 ರಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಫೌಂಡೇಶನ್ ಅನ್ನು ಸ್ಥಾಪಿಸಿ ರಾಜ್ಯಾದ್ಯಂತ ನೂರಾರು ಉದ್ಯೋಗ ಮೇಳಗಳು ,ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ 2020 ರ ನಂತರ ವಿದ್ಯಾಮಾತಾ ಅಕಾಡೆಮಿಯನ್ನು ಪ್ರಾರಂಭಿಸಿ ಕರಾವಳಿ ಭಾಗದಲ್ಲಿ 150ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಇಲಾಖೆಗಳಲ್ಲಿ ಸರಕಾರಿ ಹುದ್ದೆಗೆ ಏರುವಂತೆ ಮಾಡಿದ ಕೀರ್ತಿ ಭಾಗ್ಯೇಶ್ ರೈ ಅವರದು.
2023ರ ಸಾಲಿನಲ್ಲಿ ಬೆಂಗಳೂರಿನ ಜನಶ್ರೀ ಫೌಂಡೇಶನ್ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿ.
2023ರ ಸಾಲಿನ ಮಂದಾರ ಪ್ರಶಸ್ತಿ.
2024 ರ JCI ಸಾಧನಶ್ರೀ ಪುರಸ್ಕಾರ
2024 ರ ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ರೋಟರಿ ಯುವಸೇವಾ ರತ್ನ ಪ್ರಶಸ್ತಿ ,ಇತ್ಯಾದಿಗಳು ದೊರಕಿವೆ.
Post a Comment