ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ:ಎಸ್.ಎನ್.ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು: 11 ಬಿಜೆಪಿ ಬೆಂಬಲಿತ ಒಬ್ಬರು ಅಭ್ಯರ್ಥಿಗೆ ಜಯ

 


ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.22 ರಂದು ನಡೆದ ಚುನಾವಣೆಯಲ್ಲಿ ಐವರ್ನಾಡು ಸಹಕಾರಿ ಸಂಘದ ಹಾಲಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಎಸ್.ಎನ್.ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳು 12 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಒಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯ ಗಳಿಸಿದ್ದಾರೆ.


ಸಾಮಾನ್ಯ ಕ್ಷೇತ್ರದ ಆರು ಸ್ಥಾನಗಳಲ್ಲಿ ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳಾಗಿದ್ದ ಎಸ್.ಎನ್.ಮನ್ಮಥ, ಸತೀಶ್ ಎಡಮಲೆ, ಅನಂತಕುಮಾರ ಕೆ.,ನಟರಾಜ ಎಸ್, ಮಹೇಶ್ ಜಬಳೆ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಮಡ್ತಿಲ ಗೆಲುವು ಸಾಧಿಸಿದ್ದಾರೆ.



ಉಳಿದಂತೆ ಮನ್ಮಥ ನೇತೃತ್ವದ ತಂದಿಂದ ಸ್ಪರ್ಧಿಸಿದ್ದ ಮಹಿಳಾ ಮೀಸಲು ಕ್ಷೇತ್ರದಿಂದ ದಿವ್ಯಾ ರಮೇಶ್ ಮಿತ್ತಮೂಲೆ ಹಾಗೂ ಭವಾನಿ ಶೇಖರ ಮಡ್ತಿಲ ಜಯ ಗಳಿಸಿದರು.


ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಮಧುಕರ ನಿಡುಬೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ರವಿನಾಥ ಎಂ.ಎಸ್.ಅಯ್ಕೆಯಾದರು.

ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಚಂದ್ರಶೇಖರ ಎಸ್‌. ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಪುರಂದರ ಶಾಂತಿಮೂಲೆ ಜಯ ಗಳಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget