ಬೆಂಗಳೂರು: ‘ಗುರುದೇವರೊಂದಿಗೆ ವಿಶ್ವ ಧ್ಯಾನ’, ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿತು. ಈ ದಾಖಲೆಯು, ವಿಶ್ವದ ಅತೀ ದೊಡ್ಡ ಏಕಸಮಯದ ಸಾಮೂಹಿಕ ಧ್ಯಾನದ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ಗಿನ್ನಿಸ್ ವಿಶ್ವದಾಖಲೆಯ ಪುಸ್ತಕವನ್ನು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ಅನ್ನು ತಲುಪಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಈ ಐತಿಹಾಸಿಕ ಸಮಾವೇಶದಲ್ಲಿ ಅನೇಕ ಮಿಲಿಯನ್ ಜನರು ಜಾಗತಿಕವಾಗಿ ಒಂದಾಗಿ ಸೇರಿ, ಸಾಮೂಹಿಕ ಧ್ಯಾನದ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಥಮ ವಿಶ್ವ ಧ್ಯಾನ ದಿನವು ಐಕ್ಯತೆಯ ಹಾಗೂ ಆಂತರಿಕ ಶಾಂತಿಯ, ಸರಿಸಾಟಿಯಿಲ್ಲದಂತಹ ಉತ್ಸವವಾಗಿ ಆಚರಿಸಲ್ಪಟ್ಟಿತು. 180 ದೇಶಗಳಿಂದ ಜನರು ಭಾಗವಹಿಸಿ, ಧ್ಯಾನವು ಪರಿವರ್ತಕ ಶಕ್ತಿಯನ್ನು ಹೊಂದಿರುವಂತಹ ಜಾಗತಿಕ ಚಳುವಳಿ ಎಂದು ತೋರಿಸಿದರು. ವಿಶ್ವ ಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ವರ್ಲ್ಡ್ ಟ್ರೇಡ್ ಸೆಂಟರ್ನ ಮೇಲಿನಿಂದ ಗುರುದೇವರ ಧ್ಯಾನದ ನೇರ ಪ್ರಸಾರದೊಂದಿಗೆ ಈ ಸಮಾರಂಭವು ಮುಕ್ತಾಯಗೊಂಡಿತು. ಎಲ್ಲಾ ಖಂಡಗಳಲ್ಲೂ ಧ್ಯಾನದ ಅಲೆಯು ಹರಡಿತ್ತು. ಒಂದು ದಿನದಲ್ಲಿ, ಭಾರತದ ಎಲ್ಲಾ ರಾಜ್ಯಗಳಿಂದ ನಿರ್ದೇಶಿತ ಧ್ಯಾನದಲ್ಲಿ ಭಾಗವಹಿಸಿದ ಗರಿಷ್ಠ ಭಾಗಿಗಳು. ಗುರುದೇವರು ನಡೆಸಿಕೊಟ್ಟ ಧ್ಯಾನದ ನೇರಪ್ರಸಾರದಲ್ಲಿ ಅನೇಕ ಮಿಲಿಯನ್ ಜನರು ಅಂತರ್ಜಾಲದ ಮೂಲಕ ಭಾಗವಹಿಸಿ, ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿದರು. ಧ್ಯಾನವನ್ನು ಆರಂಭಿಸುವ ಮೊದಲು, ಧ್ಯಾನದ ಅರ್ಥವನ್ನು ಗುರುದೇವರು ವಿವರಿಸಿದರು. “ಧ್ಯಾನವೆಂದರೆ, ಆಲೋಚನೆಗಳಲ್ಲಿ ತಿಳಿದಿರುವುದನ್ನು ಅನುಭವಿಸುವ ಪಯಣ, ಧ್ಯಾನ ಮಾಡಬೇಕಾದರೆ, ವಿಪರೀತವಾಗಿ ಆಲೋಚಿಸುವುದರಿಂದ, ಏನಿದೆಯೋ ಅದನ್ನು ಅನುಭವಿಸುವುದರತ್ತ ಹೋಗಬೇಕು. ನಂತರ ಆ ಆಲೋಚನೆಗಳನ್ನೂ ದಾಟಿ ಆಂತರ್ಯದ ಆಕಾಶದೊಳಗೆ ತೆರಳುವುದು. ವಿವೇಚನೆಯುಳ್ಳವರಾಗಿ, ಸೂಕ್ಷ್ಮತೆಯುಳ್ಳವರಾಗಿ ಇರಬೇಕೆಂದರೆ ಧ್ಯಾನವನ್ನು ಮಾಡಬೇಕು. ಧ್ಯಾನವೆಂದರೆ ನಿಷ್ಕ್ರಿಯವಾದ ಸ್ಥಿತಿಯಲ್ಲ. ಧ್ಯಾನದಿಂದ ನೀವು ಹೆಚ್ಚು ಕ್ರಿಯಾಶೀಲರಾಗುತ್ತೀರಿ ಮತ್ತು ಶಾಂತಿಯುತರಾಗುತ್ತೀರಿ. ಕ್ರಾಂತಿಕಾರಿಯಾಗಲೂ ಸಹ ಧ್ಯಾನ ಮಾಡಬೇಕು” ಎಂದಿದ್ದಾರೆ.
Post a Comment