ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಗಲಕೋಟೆ ಉದ್ಯಮಿಯ ಸೇವೆ |18 ಕೆಜಿ ಬೆಳ್ಳಿ ಬಳಕೆ ಡಿ. 16ಕ್ಕೆ ನೂತನ ಬೆಳ್ಳಿಯ ಪಲ್ಲಕಿ ಸಮರ್ಪಣೆ

 


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿಯ ಪಲ್ಲಕಿಯನ್ನು ಸೇವಾರೂಪದಲ್ಲಿ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ, ಧಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸಮರ್ಪಣೆ ಮಾಡಲಿದ್ದಾರೆ. ಸುಮಾರು ರೂ.17.65 ಲಕ್ಷ ವೆಚ್ಚದಲ್ಲಿ  ರಚನೆಯಾಗಿದೆ. ಶ್ರೀ ದೇವಳದ ಬೆಳ್ಳಿಯ ವಸ್ತುಗಳ ಕೆಲಸ ನಿರ್ವಹಿಸುವ ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕ್ಕಿಯನ್ನು ನಿರ್ಮಿಸುತ್ತಿದ್ದಾರೆ. ಈಗಿರುವ ಪಲ್ಲಕಿಯಂತೆ ನೂತನ ಪಲ್ಲಕಿಯು ನಿರ್ಮಾಣ ಗೊಳ್ಳಲಿದೆ. ಸಂಪ್ರದಾಯ ಪ್ರಕಾರ ಈಗಿನ ಪಲ್ಲಕ್ಕಿಯ ರೀತಿಯಲ್ಲಿ ಹೊಸ ಪಲ್ಲಕಿ ರಚಿತವಾಗಿ ಶ್ರೀ ದೇವರಿಗೆ ಡಿ.16ರಂದು ಅರ್ಪಣೆಯಾಗಲಿದೆ. 

ಆಕರ್ಷಕ ಕೆತ್ತನೆ

ಈಗಿರುವ ಪಲ್ಲಕಿಯಲ್ಲಿರುವಂತೆ ಆಕರ್ಷಕ ಬೆಳ್ಳಿಯ ಕೆತ್ತನೆಗಳನ್ನು ನೂತನ ಪಲ್ಲಕಿಯಲ್ಲಿ ಮಾಡಲಾಗಿದೆ.


ಆರಂಭದಲ್ಲಿ ಮರದ ಪಲ್ಲಕಿಯನ್ನು ನಿರ್ಮಿಸಿ ಅದಕ್ಕೆ ಬೆಳ್ಳಿಯ ಕೆತ್ತನೆಗಳನ್ನು ಅಳವಡಿಸಲಾಗುವುದು ಬೆಳ್ಳಿಯ ನೆಗಳೆ ಬಾಯಿ ಮುಂಭಾಗದಲ್ಲಿ, ಒಳ ಭಾಗದಲ್ಲಿ ದೊಡ್ಡ ಮಧ್ಯಮ ಗಾತ್ರದ ಮತ್ತು ಚಿಕ್ಕ ಬೆಳ್ಳಿಯ ಗೊಂಡೆಯನ್ನೊಳಗೊಂಡ ಜಾಲರಿ, ಬೆಳ್ಳಿಯ ಗೊಂಡ ಮಾಲೆ. ಗಣಪತಿ, ನಾಗ, ನವಿಲು, ಕುಕ್ಕುಟವನ್ನು ಈ ಹಿಂದಿನ ಪಲ್ಲಕಿಯಲ್ಲಿ ಇರುವಂತೆ ಕೆತ್ತನೆ ಮಾಡಲಾಗಿದೆ. ಈ ಹಿಂದಿನ ಪಲ್ಲಕ್ಕಿಯ ತದ್ರೂಪದಂತೆ ನೂತನ ಪಲ್ಲಕ್ಕಿಯು ಸುಮಾರು 1 ತಿಂಗಳ ಕಾಲಾವಧಿಯಲ್ಲಿ ರಚನೆಯಾಗಿದೆ.


ಸಂಪ್ರದಾಯದಂತೆ ಹೊಸ ಪಲಕ್ಕಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ಸಲಹೆಯಂತೆ, ಈ ಹಿಂದಿನ ಪಲ್ಲಕ್ಕಿ ರೀತಿ ನೂತನ ಪಲ್ಲಕ್ಕಿ ಇರಲಿದೆ. ಆದರ ಆಯ, ಕೆತ್ತನೆ, ವಿಸ್ತೀರ್ಣ ಇತ್ಯಾದಿ ಸಂಪ್ರದಾಯದಂತೆ ಇರಲಿದೆ.


ವೀಳ್ಯ ನೀಡಿಕೆ


ಸೇವಾರ್ಥಿ ನಾಗರಾಜ ಕುಲಕರ್ಣಿ ಅವರಿಗೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀ ದೇವರ ಪ್ರಸಾದವನ್ನು ಗರ್ಭಗುಡಿಯ ಮುಂಭಾಗದಲ್ಲಿ ಪ್ರಾರ್ಥನೆ ಮಾಡಿ ಪ್ರಸಾದ ನೀಡುವ ಮೂಲಕ ನೂತನ ಪಲ್ಲಕಿ ರಚನಾ ಸೇವೆಗೆ ವೀಳ್ಯ ನೀಡಿದರು. ಈ ಸಂದರ್ಭ ಸೇವಾರ್ಥಿ ನಾಗರಾಜ ಕುಲಕರ್ಣಿ,

ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ, ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ನಹಾಯಕ ಕಾರ್ಯ ನಿರ್ವಹಣಾಧಿ ಕಾರಿ ಯೇಸುರಾಜ್, ಕಚೇರಿ ಅಧೀಕ್ಷಕ ಪದ್ಧನಾಭ ಶೆಟ್ಟಿಗಾರ್, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬೆಳವಾರ, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.


ಡಿ.15: ಕುಕ್ಕೆ ಪುರ ಪ್ರವೇಶ


ನೂತನ ಬೆಳ್ಳಿಯ ಪಲ್ಲಕಿಯು ಡಿ.15ರಂದು ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪುರ ಪ್ರವೇಶಿಸಲಿದೆ. ಕಾಶಿಕಟ್ಟೆ ಬಳಿಯಿಂದ ಶ್ರೀ ದೇವಳದ ತನಕ ಮೆರವಣಿಗೆಯಲ್ಲಿ ಪಲ್ಲಕಿಯನ್ನು ಕೊಂಡೊಯ್ಯಲಾಗುವುದು. ಮಂಗಳವಾದ್ಯ, ಚೆಂಡೆ, ಬ್ಯಾಂಡ್, ಬರುದಾವಳಿಗಳೊಂದಿಗೆ ಶ್ರೀ ದೇವಳದ ಅಧಿಕಾರಿಗಳ, ಗಣ್ಯರ


ಮತ್ತು ಭಕ್ತರ ಉಪಸ್ಥಿತಿಯಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಡಿ.16ರಂದು ಸೋಮವಾರ ಶ್ರೀ ದೇವಳದ ಪ್ರಧಾನ ಆರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ನೂತನ ಬೆಳ್ಳಿಯ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget