ಸುಳ್ಯ ತಾಲೂಕಿನ 18 ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅವಧಿ 2024ರ ಡಿಸೆಂಬರ್ ತಿಂಗಳಿಗೆ ಪೂರ್ಣಗೊಳ್ಳುವುದರಿಂದ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣಾ ದಿನಾಂಕವನ್ನು ಸಹಕಾರ ಇಲಾಖೆ ಘೋಷಣೆ ಮಾಡಿ, ಸಹಕಾರ ಸಂಘಗಳಿಗೆ ಕಳುಹಿಸಿದೆ.
ಅದರಂತೆ 2024ರ ಡಿಸೆಂಬರ್ 22ರಂದು ಐವರ್ನಾಡು ಮತ್ತು ಕನಕಮಜಲು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಯುವುದು. ಈ ಸಹಕಾರ ಸಂಘಗಳಲ್ಲಿ ದ.10ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ದ.14ರಂದು ಕೊನೆಯಾಗಲಿದೆ. ದ.15ರಂದು ನಾಮಪತ್ರಗಳ ಪರಿಶೀಲನೆ ನಡೆದು ದ.16ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 23ರಂದು ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನ ಡ ಯ ೦ಲಿ ದ ನ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುವುದು.
ದ.15ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ದ.16ರಂದು ಪರಿಶೀಲನೆ ನಡೆಯುವುದು. ದ.17 ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿರುತ್ತದೆ. ಡಿಸೆಂಬರ್ 25ರಂದು ಬೆಳ್ಳಾರೆ, ಮರ್ಕಂಜ ಮತ್ತು ಮುರುಳ್ಯ ಎಣ್ಣೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಯಲಿದ್ದು ನ.13ರಿಂದ ನಾಮಪತ್ರಸ್ವೀಕಾರ ನಡೆಯಲಿದೆ. ನ.17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ.18ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿರುತ್ತದೆ. ಡಿ.28ರಂದು ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಡಿ.29ರಂದು ಮಡಪ್ಪಾಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, 2025ರ ಜನವರಿ 11ರಂದು ಸುಬ್ರಹ್ಮಣ್ಯ ಐನೆಕಿದು ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.13ರಂದು
ಪಂಬೆತ್ತಾಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.15ರಂದು ಕಲ್ಮಡ್ಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.16ರಂದು ಪಂಜ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.17ರಂದು ಆಲೆಟ್ಟಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.19ರಂದು ಕೊಲ್ಲಮೊಗ್ರ ಹರಿಹರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಜ.27ರಂದು ಮಂಡೆಕೋಲು ಮತ್ತು ಯೇನೆಕಲ್ಲು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಫೆ. 9ರಂದು ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಫೆ.23ರಂದು ಗುತ್ತಿಗಾರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಿದೆ ಎಂದು ತಿಳಿದು ಬಂದಿದೆ.
Post a Comment