ನವದೆಹಲಿ: ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ನಿಯಮಗಳನ್ನು ಸರಳಗೊಳಿಸಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಗುರುವಾರ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಪ್ರಕಟಿಸಿರುವ ಕರಡು ಯುಜಿಸಿ (ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಕನಿಷ್ಠ ಮಾನದಂಡ) ನಿಯಮಗಳು-2024 ಪ್ರಕಾರ, ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಪ್ರತ್ಯೇಕ ಅವಧಿಯಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.
ಅಲ್ಲದೆ ಸ್ಟ್ರೀಮ್‌ಗಳನ್ನು ಬದಲಾಯಿಸಲೂ ಅವಕಾಶ ದೊರೆಯಲಿದೆ. ಜತೆಗೆ ಕೋರ್ಸ್‌ನಿಂದ ಹೊರಹೋಗುವ ಮತ್ತು ನಂತರ ಅದನ್ನು ಓದುವ ಅವಕಾಶ ಸಿಗಲಿದೆ.
ವಿದ್ಯಾರ್ಥಿಗಳ ಒಳ್ಳಗೊಳ್ಳುವಿಕೆ ಮತ್ತು ಬಹುಶಿಸ್ತೀಯ ಕಲಿಕೆಗೆ ಅವಕಾಶ ಕಲ್ಪಿಸುವ ಗುರಿಯೊಂದಿಗೆ ಸರಳ ನಿಯಮಗಳನ್ನು ರೂಪಿಸಲಾಗಿದೆ. ಇವು ಜಾಗತಿಕ ಮಾನದಂಡಗಳನ್ನು ಪೂರೈಸುತ್ತವೆ
Post a Comment