ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ - ದೇಸೀ ಆಹಾರ ವೈವಿಧ್ಯ ಪರಿಚಯಿಸಲು ಫುಡ್ ಕೋರ್ಟ್
ಮಂಗಳೂರಿನ ಮಹಾನಗರದ ಗೋಲ್ಡ್ ಪಿಂಚ್ ಸಿಟಿಯಲ್ಲಿ ರಾಮ ಲಕ್ಷ್ಮಣ ಜೋಡುಕರೆ ಕಂಬಳವು ಡಿ.28ರಿಂದ ಡಿ.29 ರ ತನಕ ನಡೆಯಲಿದೆ.
ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಭಾಗವಾಗಿರುವ ಕಂಬಳ ಈ ಮಣ್ಣಿನ ಧಾರ್ಮಿಕ ಕಟ್ಟುಕಟ್ಟಳೆಗಳೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ ಇಲ್ಲಿನ ಜನಜೀವನವನ್ನು ಬಿಂಬಿಸುವ ಕೃಷಿಕ ಮತ್ತು ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆಯು ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯವಾಗುತ್ತ ಬಂದಿದೆ.
ಕಂಬಳವನ್ನು ನಿಷೇಧಿಸುವ ಸಂದರ್ಭದಲ್ಲಿ ಸಂದರ್ಭದಲ್ಲಿ ಕಂಬಳ ಕ್ಕೆ ಹೋರಾಟ ಮಾಡಿ ಮಂಗಳೂರು ಕಂಬಳ ವನ್ನು ಯಶಸ್ವಿಯಾಗಿ ಮಾಡಿದ ಮಂಗಳೂರು ಕಂಬಳ ಗೌರವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ , ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯುತ್ತಿರುವ ಕಂಬಳ ನಮ್ಮ ಸಂಸ್ಕೃತಿಗೆ ಧಕ್ಕೆ ತರಲು ಯತ್ನಿಸಿದ ಪೆಟಾ ಸಂಸ್ಥೆಯ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಹುಟ್ಟಿಕೊಂಡ ಕಿಚ್ಚು 'ಮಂಗಳೂರು ಕಂಬಳ'ವು ಇಂದು 8ನೇ ವರ್ಷಕ್ಕೆ ಹೆಜ್ಜೆಯನ್ನಿರಿಸಿದೆ.
ಇಂದು ವಿಶ್ವವ್ಯಾಪಿಯಾಗಿ ಮನ್ನಣೆಯನ್ನು ಪಡೆಯುತ್ತಿರುವ ಕಂಬಳವು ಅನೇಕ ದಾಖಲೆಗಳನ್ನು ಬರೆಯುತ್ತಾ, ಜನಾಕರ್ಷಣೆ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ, 'ಅಲೇ ಬುಡಿಯೆರ್' ಎಂಬ ಝೇಂಕಾರವು ಮಾರ್ದನಿಸಲಿದೆ ಹಾಗೂ ಈ ಮಣ್ಣಿನ ಹೆಮ್ಮೆಯ ಜನಪದ ಕ್ರೀಡೆಯ ಪರಿಮಳವು ಜಗದಗಲ ಪಸರಿಸುವ ಕಾರ್ಯ ನಡೆಯಲಿದೆ. ಮಕ್ಕಳಿಗೆ ಡ್ರಾಯಿಂಗ್ ಸ್ಪರ್ಧೆ,ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಈ ಬಾರಿ ವಿಶೇಷವಾಗಿ ದೇಸಿ ಆಹಾರ ವೈವಿಧ್ಯ ಪರಿಚಯಿಸಲು ಫುಡ್ ಕೋರ್ಟ್ ತೆರೆಯಲಾಗಿದೆ.ಎಂದು ಕಂಬಳ ಸಮಿತಿಯವರು ತಿಳಿಸಿದ್ದಾರೆ.
Post a Comment